ಸೌದಿ ಅರೇಬಿಯಾ ಕಳೆದ 10 ದಿನಗಳಲ್ಲಿ 12 ಜನರಿಗೆ ಮರಣದಂಡನೆ ವಿಧಿಸಿದೆ. ಇವುಗಳಲ್ಲಿ ಕತ್ತಿಯಿಂದ ಶಿರಚ್ಛೇದನ ಮಾಡಿರುವ ಪ್ರಕರಣಗಳೇ ಹೆಚ್ಚು.
ಇಂತಹ ಕ್ರೂರ ಶಿಕ್ಷೆಗೆ ಕಾರಣವಾಗಿದ್ದು ಮಾದಕ ವಸ್ತು ಆರೋಪ. ಮೂವರು ಪಾಕಿಸ್ತಾನಿಗಳು, ನಾಲ್ವರು ಸಿರಿಯನ್ನರು, ಇಬ್ಬರು ಜೋರ್ಡಾನಿಯನ್ನರು ಮತ್ತು ಮೂವರು ಸೌದಿಗಳಿಗೆ ಮರಣದಂಡನೆ ವಿಧಿಸಲಾಗಿದೆ.
ಇದರೊಂದಿಗೆ ಸೌದಿ ಅರೇಬಿಯಾದಲ್ಲಿ ಈ ವರ್ಷ ಗಲ್ಲಿಗೇರಿಸಲಾದ ಒಟ್ಟು ಜನರ ಸಂಖ್ಯೆ ಕನಿಷ್ಠ 132 ಆಗಿದೆ. ಇದು 2020 ಮತ್ತು 2021 ರ ಒಟ್ಟು ಸಂಖ್ಯೆಯನ್ನು ಮೀರಿದೆ ಎಂದು ವರದಿಯಾಗಿದೆ.