ಮಧ್ಯಪ್ರದೇಶದ ಇಂದೋರ್‌ನ ಕೆಫೆಯೊಂದರಲ್ಲಿ ತಾನು ಹಿಂದೂ ಎಂದು ಹೇಳಿ ಹುಡುಗಿಯನ್ನು ಭೇಟಿ ಮಾಡಿದ ಆರೋಪದ ಮೇಲೆ ಮುಸ್ಲಿಂ ಹುಡುಗನಿಗೆ ಭಜರಂಗದಳ ಕಾರ್ಯಕರ್ತರು ಥಳಿಸಿದ್ದಾರೆ.
ಭಜರಂಗದಳದ ಕೆಲವು ಕಾರ್ಯಕರ್ತರು ಇಂದೋರ್‌ನ ಛತ್ರಿಪುರಾ ಪ್ರದೇಶದ ಕೆಫೆಯನ್ನು ತಲುಪಿದಾಗ ತನ್ನನ್ನು ಕಾಶಿ ಎಂದು ಗುರುತಿಸಿಕೊಂಡ ಮುಸ್ಲಿಂ ಯುವಕನು ಹಿಂದೂ ಸಮುದಾಯದ ಹುಡುಗಿಯನ್ನು ಭೇಟಿಯಾದಾಗ ಈ ಘಟನೆ ಸಂಭವಿಸಿದೆ.
ಮುಸ್ಲಿಂ ಯುವಕನೊಬ್ಬ ತನ್ನ ಗುರುತನ್ನು ಬಚ್ಚಿಟ್ಟು ಹಿಂದೂ ಯುವತಿಯನ್ನು ಭೇಟಿಯಾಗಿರುವ ಬಗ್ಗೆ ಬಜರಂಗದಳದ ಕಾರ್ಯಕರ್ತರು ಮಾಹಿತಿ ಪಡೆದಿದ್ದರು. ಸಂಘಟನೆಯ ಕಾರ್ಯಕರ್ತರು ಕೆಫೆಗೆ ತಲುಪಿ ಆತನಿಗೆ ತನ್ನ ಹೆಸರು ಹೇಳುವಂತೆ ಕೇಳಿದ್ದಾರೆ. ಮುಸ್ಲಿಂ ಯುವಕ ತನ್ನನ್ನು ಕಾಶಿ ಎಂದು ಗುರುತಿಸಿಕೊಂಡಿದ್ದ. ಆದರೆ ಗುರುತಿನ ಚೀಟಿಯಲ್ಲಿ ಅವನ ಹೆಸರನ್ನು ಕಾಸಿಂ ಖಾನ್ ಎಂದಿತ್ತು.
ಮುಸ್ಲಿಂ ಯುವಕನ ಗುರುತು ಬಜರಂಗ ದಳದ ಕಾರ್ಯಕರ್ತರನ್ನು ಕೆರಳಿಸಿತು. ನಂತರ ಅವರು ಸ್ಥಳದಲ್ಲೇ ಅವನನ್ನು ಥಳಿಸಿದ್ದಾರೆ. ಮಾಹಿತಿ ಪಡೆದ ನಗರ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಮುಸ್ಲಿಂ ಯುವಕರನ್ನು ವಶಕ್ಕೆ ಪಡೆದರು.