2022 ರ FIFA ವಿಶ್ವಕಪ್ ಕತಾರ್ನಲ್ಲಿ ಪ್ರಾರಂಭವಾಗಿದ್ದು ಫುಟ್ ಬಾಲ್ ಅಭಿಮಾನಿಗಳು ಕ್ರೀಡೆಯನ್ನ ಕಣ್ತುಂಬಿಕೊಳ್ಳಲು ಆರಂಭಿಸಿದ್ದಾರೆ. ತಮ್ಮ ನೆಚ್ಚಿನ ಆಟಗಾರರ ಕಟೌಟ್ಗಳು ಮತ್ತು ಪೋಸ್ಟರ್ಗಳಿಂದ ಬೀದಿಗಳನ್ನು ಅಲಂಕರಿಸುವುದರಿಂದ ಮುಂಗಡವಾಗಿ ದುಬಾರಿ ಟಿಕೆಟ್ಗಳನ್ನು ಖರೀದಿಸುವವರೆಗೆ, ಫುಟ್ಬಾಲ್ ಅಭಿಮಾನಿಗಳು ಕ್ರೀಡೆಯ ಮೇಲಿನ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ಎಲ್ಲಾ ರೀತಿಯ ಹುಚ್ಚುತನದ ಕೆಲಸಗಳನ್ನು ಮಾಡುತ್ತಾರೆ. ಅಂತಹ ಒಂದು ಕಥೆ ಕೇರಳದಿಂದ ವರದಿಯಾಗಿದೆ. ಅದೇನೆಂದರೆ ಯುವತಂಡವೊಂದು FIFA ವಿಶ್ವಕಪ್ ವೀಕ್ಷಿಸಲು ಹೊಸ ಮನೆಯನ್ನೇ ಖರೀದಿಸಿದೆ.
ಕೇರಳದ ಕೊಚ್ಚಿ ಜಿಲ್ಲೆಯ ಮುಂಡಕ್ಕಮುಗಲ್ ಗ್ರಾಮದ 17 ನಿವಾಸಿಗಳು 23 ಲಕ್ಷ ರೂಪಾಯಿಗೆ ಮನೆಯೊಂದನ್ನು ಖರೀದಿಸಿದ್ದಾರೆ. ಅವರೆಲ್ಲರೂ ಒಂದೇ ಸ್ಥಳದಲ್ಲಿ ಒಟ್ಟಿಗೆ ಕೂತು ಫಿಫಾ ಪಂದ್ಯಗಳನ್ನು ವೀಕ್ಷಿಸಲು ಈ ರೀತಿ ಮಾಡಿದ್ದಾರೆ.
ಫುಟ್ಬಾಲ್ ಸ್ನೇಹಿತರು ಹೊಸದಾಗಿ ಖರೀದಿಸಿದ ಮನೆಯನ್ನು ವಿಶ್ವಕಪ್ನಲ್ಲಿ ಭಾಗವಹಿಸುವ 32 ತಂಡಗಳ ಧ್ವಜಗಳ ಜೊತೆಗೆ ಫುಟ್ಬಾಲ್ ತಾರೆಗಳಾದ ಲಿಯೋನೆಲ್ ಮೆಸ್ಸಿ ಮತ್ತು ಕ್ರಿಸ್ಟಿಯಾನೋ ರೊನಾಲ್ಡೊ ಅವರ ಭಾವಚಿತ್ರಗಳೊಂದಿಗೆ ಅಲಂಕರಿಸಿದ್ದಾರೆ. ಮನೆಯಲ್ಲಿ ಎಲ್ಲರೂ ಒಟ್ಟಿಗೆ ಪಂದ್ಯ ವೀಕ್ಷಿಸಲು ದೊಡ್ಡ ಪರದೆಯ ದೂರದರ್ಶನವನ್ನು ಅಳವಡಿಸಿದ್ದಾರೆ.
ಕಳೆದ 15-20 ವರ್ಷಗಳಿಂದ ಒಟ್ಟಿಗೆ ಕೂತು ಫುಟ್ ಬಾಲ್ ಪಂದ್ಯಗಳನ್ನು ವೀಕ್ಷಿಸುತ್ತಿರುವ ಅವರು ಈ ಬಾರಿ ಮನೆ ಖರೀದಿಸಲು ನಿರ್ಧರಿಸಿದರು.
FIFA ವಿಶ್ವ ಕಪ್ 2022 ಕತಾರ್ನಲ್ಲಿ ನವೆಂಬರ್ 20 ರಿಂದ ಡಿಸೆಂಬರ್ 18 ರವರೆಗೆ ನಡೆಯಲಿದೆ. ಮುಂದಿನ ತಿಂಗಳಿನಲ್ಲಿ, 32 ದೇಶಗಳ ರಾಷ್ಟ್ರೀಯ ತಂಡಗಳ ಆಟಗಾರರು ಎಲಿಮಿನೇಷನ್ ಆಟಗಳ ಸರಣಿಯಲ್ಲಿ ಸ್ಪರ್ಧಿಸುತ್ತಾರೆ, ಡಿಸೆಂಬರ್ 18 ರಂದು ಒಂದು ರಾಷ್ಟ್ರೀಯ ತಂಡವು 2022 ರ ವಿಶ್ವಕಪ್ ಚಾಂಪಿಯನ್ ಆಗಿ ಕಿರೀಟವನ್ನು ಪಡೆಯುತ್ತದೆ.
ಅಲ್ ಖೋರ್ನ ಅಲ್ ಬೇತ್ ಸ್ಟೇಡಿಯಂನಲ್ಲಿ ನಡೆಯಲಿರುವ ಮೊದಲ ಪಂದ್ಯದಲ್ಲಿ ಈಕ್ವೆಡಾರ್ ತಂಡ ಆತಿಥೇಯ ಕತಾರ್ ವಿರುದ್ಧ ಸೆಣಸಲಿದೆ. ಮಧ್ಯಪ್ರಾಚ್ಯದ ದೇಶವೊಂದು ಫಿಫಾ ವಿಶ್ವಕಪ್ಗೆ ಆತಿಥ್ಯ ವಹಿಸುತ್ತಿರುವುದು ಇದೇ ಮೊದಲು.