ನಿದ್ದೆಗೆ ಜಾರಿದ ಕುಚಿಕು ಗೆಳೆಯ: ತನ್ನ ಹೆಗಲನ್ನೇ ಕೊಟ್ಟು ಸಂಭಾಳಿಸಿದ ಪುಟ್ಟ ಬಾಲಕ 21-11-2022 9:01AM IST / No Comments / Posted In: Latest News, Live News, International ವಿಷ್ಣುವರ್ಧನ್ ಹಾಗೂ ಅಂಬರೀಷ್ ಈ ಎರಡು ಹೆಸರು ಕಿವಿಗೆ ಬಿದ್ದರೆ ಸಾಕು, ಕುಚಿಕು….. ಕುಚಿಕು…… ಅನ್ನೋ ಹಾಡು ನೆನಪಾಗಿ ಬಿಡುತ್ತೆ. ಇವರಿಬ್ಬರು ತೆರೆಯ ಮೇಲಷ್ಟೆ ಅಲ್ಲ ತೆರೆಯ ಹಿಂದೆಯೂ ಪಕ್ಕಾ ಗೆಳೆಯರಾಗಿದ್ದರು. ಇವರಿಬ್ಬರನ್ನೂ ನೋಡಿದವರೆಲ್ಲರೂ, ಹೇಳೋದು ಒಂದೇ ಮಾತಾಗಿತ್ತು. ಗೆಳತನ ಇದ್ದರೆ ಹೀಗಿರಬೇಕು ಅಂತ. ಈಗ ಅದೇ ಜೋಡಿಯನ್ನ ನೆನಪಿಸುತ್ತೆ ಈ ಪುಟಾಣಿಗಳ ಗೆಳೆತನ. ನೋಡಿದ್ರಾ ಈ ವಿಡಿಯೋವನ್ನ, ಕೊಂಚ ನಗು, ಕೊಂಚ ಅಚ್ಚರಿ ತರಿಸಿಬಿಡುತ್ತೆ. ಅಸಲಿಗೆ ಈ ವಿಡಿಯೋದಲ್ಲಿ ಪುಟ್ ಪುಟಾಣಿ ವಿದ್ಯಾರ್ಥಿಗಳು ಶಾಲೆಯ ಬೇಂಜ್ ಮೇಲೆ ಕುತಿದ್ದಾರೆ. ಬೇಂಜ್ ತುದಿಯಲ್ಲಿ ಕೂತಿದ್ದ ವಿದ್ಯಾರ್ಥಿಯೊಬ್ಬನಿಗೆ ನಿದ್ದೆ ಬಂದಿದೆ. ಆತ ಕುಳಿತಲ್ಲೇ ತೂಕಡಿಸ್ತಾ ಇರ್ತಾನೆ. ಇನ್ನೇನು ನಿದ್ದೆಗುಂಗಲ್ಲಿ ಕೆಳಗೆ ಬಿದ್ದೇ ಬಿಡ್ತಾನೆ ಅನ್ನುವಷ್ಟರಲ್ಲಿ, ಪಕ್ಕದಲ್ಲಿ ಕುಳಿತಿರುವ ಗೆಳೆಯ ಆತನ ತಲೆಗೆ ತನ್ನ ಹೆಗಲನ್ನೇ ಆಸರೆಯಾಗಿ ಕೊಡುತ್ತಾನೆ. ಈತನ ಈ ಸಹಾಯದಿಂದ ಗೆಳೆಯ ಇನ್ನಷ್ಟು ನೆಮ್ಮದಿಯಾಗಿ ನಿದ್ದೆ ಮಾಡುತ್ತಾನೆ. ನೆಟ್ಟಿಗರು ಈ ವಿಡಿಯೋ ನೋಡಿ ಫುಲ್ ಫಿದಾ ಆಗೋಗಿದ್ದಾರೆ.ಈಗಾಗಲೇ 26 ಸೆಕೆಂಡ್‌ನ ಈ ವಿಡಿಯೋವನ್ನ,27.4 ಮಿಲಿಯನ್ ಜನ ವೀಕ್ಷಿಸಿದ್ದಾರೆ. ಕಷ್ಟ-ಸುಖ ಈ ಸಮಯದಲ್ಲಿ ಭಾಗಿಯಾಗಿದ್ದವನೇ ನಿಜವಾದ ಗೆಳೆಯ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು ಈ ಪುಟಾಣಿಗಳಿಂದ ಕಲಿಯೋದು ತುಂಬಾನೇ ಇದೆ ಎಂದು ತಮ್ಮ ಅಭಿಪ್ರಾಯವನ್ನ ತಿಳಿಸಿದ್ದಾರೆ. ತುಂಬಾ ಜನರಂತೂ ಈ ವಿಡಿಯೋ ನಮ್ಮ ಬಾಲ್ಯದ ಸ್ನೇಹಿತರನ್ನ ನೆನಪಿಸಿದೆ ಎಂದು ಕಾಮೆಂಟ್ ಬಾಕ್ಸ್‌ನಲ್ಲಿ ತಮ್ಮ ಮನದಾಳದ ಮಾತನ್ನ ಬರೆದುಕೊಂಡಿದ್ದಾರೆ. Life is better with caring good friends. pic.twitter.com/y9lbuKa7up — Vala Afshar (@ValaAfshar) November 11, 2022