ತಮಿಳುನಾಡಿನ ತಿರುವಣ್ಣಾಮಲೈನಲ್ಲಿ ಸರ್ಕಾರಿ ಬಸ್ ಕಂಡಕ್ಟರ್ ಪಾನಮತ್ತ ವ್ಯಕ್ತಿಯನ್ನು ಹಿಂಸಾತ್ಮಕವಾಗಿ ಬಸ್ನಿಂದ ತಳ್ಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ವಂದವಾಸಿಯಲ್ಲಿ ಈ ಘಟನೆ ನಡೆದಿದ್ದು, ಬೆಂಗಳೂರಿನಿಂದ ಬರುತ್ತಿದ್ದ ಬಸ್ನಿಂದ ಪಾನಮತ್ತ ವ್ಯಕ್ತಿಯೊಬ್ಬರು ಕೆಳಗೆ ಇಳಿಯಲು ಹರಸಾಹಸ ಪಡುತ್ತಿರುವುದನ್ನು ನೋಡಬಹುದಾಗಿದೆ.
ವೈರಲ್ ವೀಡಿಯೊದಲ್ಲಿ ಕಂಡಕ್ಟರ್ ಕುಡಿದ ವ್ಯಕ್ತಿಯನ್ನು ಬಸ್ನಿಂದ ಕೆಳಗಿಳಿಯುವಂತೆ ಕೂಗುತ್ತಿದ್ದಾನೆ. ಬಳಿಕ ಸಿಟ್ಟಿಗೆದ್ದ ಕಂಡಕ್ಟರ್ ಕುಡಿದ ಪಾನಮತ್ತ ವ್ಯಕ್ತಿಯನ್ನು ಹಿಂಸಾತ್ಮಕವಾಗಿ ಬಸ್ ನಿಂದ ತಳ್ಳುತ್ತಾರೆ. ಪಾನಮತ್ತ ವ್ಯಕ್ತಿ ನೆಲದ ಮೇಲೆ ಬೀಳುತ್ತಾನೆ. ನಂತರ ಬಸ್ಸು ಸ್ಥಳದಿಂದ ಹೊರಟು ಹೋಗುತ್ತದೆ.
ಈ ಬಗ್ಗೆ ತನಿಖೆ ಆರಂಭಿಸಲಾಗಿದೆ ಎಂದು ವಂದವಾಸಿ ಬಸ್ ಸಾರಿಗೆ ಅಧಿಕಾರಿಗಳು ತಿಳಿಸಿದ್ದಾರೆ. ಆ ವ್ಯಕ್ತಿ ಬಸ್ಸಿನೊಳಗೆ ಮದ್ಯ ಸೇವಿಸಿ ಗಲಾಟೆ ಮಾಡುತ್ತಿದ್ದರಿಂದ ಪ್ರಯಾಣಿಕರಿಗೆ ತೊಂದರೆಯಾಗುತ್ತಿತ್ತು ಎಂದು ಬಸ್ ಕಂಡಕ್ಟರ್ ಹೇಳಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.