ಶ್ರದ್ಧಾ ವಾಲ್ಕರ್ ಅವರ ಭೀಕರ ಹತ್ಯೆ ಪ್ರಕರಣದ ತನಿಖೆ ಮುಂದುವರೆದಿದ್ದು, ದೆಹಲಿ ಪೊಲೀಸರು ಇಂದು ನಗರದ ಮೆಹ್ರೌಲಿ ಪ್ರದೇಶದಲ್ಲಿನ ಕೊಳದಲ್ಲಿ ಸಂತ್ರಸ್ತೆಯ ತಲೆಗಾಗಿ ಹುಡುಕಾಟ ನಡೆಸಿದ್ದಾರೆ.
ಮೂಲಗಳ ಪ್ರಕಾರ ಶ್ರದ್ಧಾಳ ಗೆಳೆಯ ಮತ್ತು ಆಪಾದಿತ ಹಂತಕ ಅಫ್ತಾಬ್ ಪೂನಾವಾಲಾ ಶ್ರದ್ಧಾಳ ಛಿದ್ರಗೊಂಡ ತಲೆಯನ್ನು ಕೊಳದಲ್ಲಿ ಎಸೆದಿದ್ದೇನೆ ಎಂದು ತನಿಖಾ ತಂಡಕ್ಕೆ ತಿಳಿಸಿದ್ದಾನೆ.
ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್ (MCD) ಯ ಕಾರ್ಮಿಕರೊಂದಿಗೆ ದೆಹಲಿ ಪೊಲೀಸ್ ಅಧಿಕಾರಿಗಳ ತಂಡವು ಇಂದು ಮೆಹ್ರೌಲಿ ಕೊಳದಿಂದ ನೀರನ್ನು ಖಾಲಿ ಮಾಡಲು ಪ್ರಾರಂಭಿಸಿದೆ.
ಶ್ರದ್ಧಾ ಮತ್ತು ಅಫ್ತಾಬ್ ಈ ವರ್ಷದ ಮೇ ತಿಂಗಳಲ್ಲಿ ಮುಂಬೈನಿಂದ ದೆಹಲಿಗೆ ತೆರಳಿದ್ದರು ಮತ್ತು ಛತ್ತರ್ಪುರದ ಬಾಡಿಗೆ ಅಪಾರ್ಟ್ಮೆಂಟ್ನಲ್ಲಿ ಲಿವ್ -ಇನ್ ರಿಲೇಷನ್ ಶಿಪ್ ನಲ್ಲಿದ್ದರು.
ಮದುವೆಯಾಗು ಎಂದು ಕೇಳುತ್ತಿದ್ದ ಶ್ರದ್ಧಾಳ ಜೊತೆ ಜಗಳ ತೆಗೆಯುತ್ತಿದ್ದ ಅಫ್ತಾಬ್ ಶ್ರದ್ಧಾಳನ್ನು ಕತ್ತು ಹಿಸುಕಿ ಕೊಂದಿದ್ದಾನೆ ಎಂದು ವರದಿಯಾಗಿದೆ. ನಂತರ ಅವನು ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ ತಮ್ಮ ಅಪಾರ್ಟ್ಮೆಂಟ್ನಲ್ಲಿ ಫ್ರಿಡ್ಜ್ನಲ್ಲಿ ಇರಿಸಿದ್ದ. ಆ ಬಳಿಕ 18 ದಿನಗಳ ಕಾಲ ಮೆಹ್ರೌಲಿಯ ಕಾಡಿನಲ್ಲಿ ದಿನಕ್ಕೆರಡು ತುಂಡುಗಳಂತೆ ವಿಲೇವಾರಿ ಮಾಡಿದ್ದ.