alex Certify 24 ವರ್ಷಕ್ಕೇ ಇಹಲೋಕ ತ್ಯಜಿಸಿದ ನಟಿ, ಬಹಳ ದಿನಗಳಿಂದ ಕಾಡುತ್ತಿತ್ತು ಮಾರಕ ಕಾಯಿಲೆ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

24 ವರ್ಷಕ್ಕೇ ಇಹಲೋಕ ತ್ಯಜಿಸಿದ ನಟಿ, ಬಹಳ ದಿನಗಳಿಂದ ಕಾಡುತ್ತಿತ್ತು ಮಾರಕ ಕಾಯಿಲೆ….!

ಸಿನಿ ಜಗತ್ತಿನಲ್ಲಿ ಕಳೆದ ಕೆಲವು ದಿನಗಳಿಂದ ಸಾವಿನ ಸುದ್ದಿಗಳೇ ಬರುತ್ತಿವೆ. ಅನೇಕ ಪ್ರಸಿದ್ಧ ನಟ-ನಟಿಯರು ಈಗಾಗ್ಲೇ ಇಹಲೋಕ ತ್ಯಜಿಸಿದ್ದಾರೆ. ಇದೀಗ 24 ವರ್ಷದ ಪ್ರತಿಭಾವಂತ ನಟಿಯ ಸಾವು ಜನರಿಗೆ ಆಘಾತ ತಂದಿದೆ. ಬಂಗಾಳಿ ನಟಿ ಆಂಡ್ರಿಲಾ ಶರ್ಮಾ ಸಾವನ್ನಪ್ಪಿದ್ದಾರೆ. ಆಂಡ್ರಿಲಾ ಬ್ರೈನ್‌ ಸ್ಟ್ರೋಕ್‌ಗೆ ತುತ್ತಾಗಿದ್ದರು. ಕೋಲ್ಕತ್ತಾದ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಂಡ್ರಿಲಾ ಮೃತಪಟ್ಟಿದ್ದಾರೆ.

ಆಂಡ್ರಿಲಾ ಶರ್ಮಾ ಬಹಳ ಸಮಯದಿಂದ್ಲೂ ಕೋಮಾದಲ್ಲಿದ್ದರು. ಆಕೆ ಚೇತರಿಸಿಕೊಳ್ಳಲು ಅಂತಾ ಅಭಿಮಾನಿಗಳು ಪ್ರಾರ್ಥಿಸುತ್ತಿದ್ರು. ಆದರೆ ಕೇವಲ 24ರ ಹರೆಯದಲ್ಲೇ ಆಂಡ್ರಿಲಾ ಜಗತ್ತಿಗೆ ವಿದಾಯ ಹೇಳಿದ್ದಾರೆ. ಆಂಡ್ರಿಲಾ ಕ್ಯಾನ್ಸರ್‌ಗೂ ತುತ್ತಾಗಿದ್ದರು. ಆದ್ರೆ ಕ್ಯಾನ್ಸರ್‌ ವಿರುದ್ಧ ಹೋರಾಡಿ ಗೆದ್ದಿದ್ದ ಆಂಡ್ರಿಲಾ ನವೆಂಬರ್‌ 1ರಂದು ಬ್ರೈನ್‌ ಸ್ಟ್ರೋಕ್‌ಗೆ ತುತ್ತಾದ್ರು. ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಲಿಲ್ಲ. ಆಂಡ್ರಿಲಾ ಕೋಮಾದಿಂದ ಹೊರಬರಲೇ ಇಲ್ಲ.

ನವೆಂಬರ್ 14 ರಂದು ಆಕೆ ಆಸ್ಪತ್ರೆಯಲ್ಲೇ ಹಲವಾರು ಬಾರಿ ಕಾರ್ಡಿಯಾಕ್‌ ಅರೆಸ್ಟ್‌ಗೆ ತುತ್ತಾಗಿದ್ದಾರೆ. ಇದರಿಂದ ಅವರ ಆರೋಗ್ಯ ಮತ್ತಷ್ಟು ಹದಗೆಟ್ಟಿದೆ. ಆಂಡ್ರಿಲಾರನ್ನು ವೆಂಟಿಲೇಟರ್‌ನಲ್ಲಿ ಇಡಲಾಗಿತ್ತು. ಆದ್ರೆ ಇಂದು ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದಾರೆ. ಆಂಡ್ರಿಲಾ ಶರ್ಮಾ ಜೂಮರ್ ಧಾರಾವಾಹಿ ಮೂಲಕ ಟಿವಿ ಲೋಕಕ್ಕೆ ಪಾದಾರ್ಪಣೆ ಮಾಡಿದರು. ಅನೇಕ ಧಾರಾವಾಹಿಗಳಲ್ಲಿ ಆಕೆ ನಟಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...