ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ಟಿ ಟ್ವೆಂಟಿ ಸರಣಿಯ ಮೊದಲ ಪಂದ್ಯ ಮೊನ್ನೆ ಮಳೆಯಿಂದ ರದ್ದಾಗಿದ್ದು, ಉಳಿದಿರುವ ಎರಡು ಟಿ ಟ್ವೆಂಟಿ ಪಂದ್ಯಗಳಲ್ಲಿ ಎರಡು ತಂಡಗಳು ತಲಾ ಒಂದೊಂದು ಪಂದ್ಯ ಗೆದ್ದರೇ ಸರಣಿ ಸಮಬಲವಾಗಲಿದೆ.
ಇಂದು ಎರಡನೇ ಟಿ-20 ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ನ ನಾಯಕ ಕೇನ್ ವಿಲಿಯಮ್ಸನ್ ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡರು.
ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡದಲ್ಲಿ ರಿಷಬ್ ಪಂತ್ 6 ರನ್ ಗಳಿಸಿ ಔಟಾದರೇ ಈಶನ್ ಕಿಶನ್ 36 ರನ್ ಗಳಿಸಿದ್ದು, ಇಶ್ ಸೋಧಿಗೆ ತಮ್ಮ ವಿಕೆಟ್ ಒಪ್ಪಿಸಿದ್ದಾರೆ.
ನಂತರ ಬಂದ ಸೂರ್ಯಕುಮಾರ್ ಯಾದವ್ ನ್ಯೂಜಿಲೆಂಡ್ ಬೌಲರ್ ಗಳ ಬೆವರಿಳಿಸಿದ್ದಾರೆ. ಕೇವಲ 51 ಎಸೆತಗಳಲ್ಲಿ (111) ರನ್ ಸಿಡಿಸಿದ್ದಾರೆ. ಇವರ ಈ ಸ್ಫೋಟಕ ಇನ್ನಿಂಗ್ಸ್ ನಲ್ಲಿ 11 ಬೌಂಡರಿ ಹಾಗೂ 7 ಸಿಕ್ಸರ್ ಸೇರಿವೆ ಒಟ್ಟಾರೆ ಭಾರತ ತಂಡ 6 ವಿಕೆಟ್ ನಷ್ಟಕ್ಕೆ 191 ರನ್ ಗಳ ಮೊತ್ತ ದಾಖಲಿಸಿದೆ.