ಮೈಸೂರು: ಮಂಗಳೂರಿನಲ್ಲಿ ಆಟೋ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಪೊಲೀಸರು ಶಂಕಿತನ ಗುರುತು ಪತ್ತೆ ಹಚ್ಚಿದ್ದಾರೆ.
ಶಂಕಿತ ವ್ಯಕ್ತಿ ಮೈಸೂರಿನ ಲೋಕನಾಯಕ ನಗರದ 10ನೇ ಕ್ರಾಸ್ ನಲ್ಲಿ ಸಿಂಗಲ್ ರೂಮ್ ಬಾಡಿಗೆ ಪಡೆದು ವಾಸವಾಗಿದ್ದ. ಮೋಹನ್ ಕುಮಾರ್ ಎಂಬುವವರ ಮನೆಯಲ್ಲಿ ಬಾಡಿಗೆಗೆ ಇದ್ದು, ಮನೆ ಅಗ್ರಿಮೆಂಟ್ ಪೇಪರ್ ನಲ್ಲಿ ಪ್ರೇಮ್ ಕುಮಾರ್ ಎಂದು ಹೆಸರು ಉಲ್ಲೇಖಿಸಿದ್ದ.
ಹುಬ್ಬಳ್ಳಿ ವಿಳಾಸ ನೀಡಿ ಅಗ್ರಿಮೆಂಟ್ ಮಾಡಿಕೊಂಡಿದ್ದ. ಇದು ಕೂಡ ನಕಲಿಯಾಗಿದ್ದು ನಕಲಿ ವಿಳಾಸ ನೀಡಿ ಅಗ್ರಿಮೆಂಟ್ ಮಾಡಿಕೊಂಡಿದ್ದ ಎಂಬುದು ಪೊಲೀಸರ ಪರಿಶೀಲನೆ ವೇಳೆ ಬಯಲಾಗಿದೆ.