ವಿವೋ ಪ್ರೋ ಕಬ್ಬಡಿ ಸೀಸನ್ 9ರ ಟೇಬಲ್ ಟಾಪರ್ ಆಗಿರುವ ಬೆಂಗಳೂರು ಬುಲ್ಸ್ ಹಾಗೂ ಪೂಣೇರಿ ಪಲ್ಟಾನ್ ಮುಖಾಮುಖಿಯಾಗಲಿದ್ದು, ಈ ಪಂದ್ಯಕ್ಕಾಗಿ ಕಬ್ಬಡಿ ಪ್ರೇಮಿಗಳು ಕಾತುರದಿಂದ ಕಾಯುತ್ತಿದ್ದಾರೆ. ಅಂಕಪಟ್ಟಿಯಲ್ಲಿ ಬೆಂಗಳೂರು ಬುಲ್ಸ್ ಮೊದಲನೇ ಸ್ಥಾನದಲ್ಲಿದ್ದರೇ ಪುಣೇರಿ ಪಲ್ಟಾನ್ ಎರಡನೇ ಸ್ಥಾನದಲ್ಲಿದೆ.
ಪುಣೇರಿ ಪಲ್ಟಾನ್ ನಲ್ಲಿ ಸ್ಟಾರ್ ಡಿಫೆಂಡರ್ ಫಝೆಲ್ ಸುಲ್ತಾನ್ ಅಟ್ರಾಚಲಿ ಸೇರಿದಂತೆ ಮೋಹಿತ್ ಗೋಯಟ್, ಅಸ್ಲಾಮ್ ಇನಾಮ್ದಾರ್, ಹಾಗೂ ಆಕಾಶ್ ಶಿಂಧೆ ಮೂವರು ಬಲಿಷ್ಠ ರೈಡರ್ ಗಳಿದ್ದಾರೆ. ಇನ್ನು ಬೆಂಗಳೂರು ಬುಲ್ಸ್ ತಂಡದಲ್ಲಿ ಅತ್ಯುತ್ತಮ ರೈಡರ್ ಭರತ್ ಹೂಡ ಹಾಗೂ ಡಿಫೆಂಡಿಗ್ ನಲ್ಲಿ ಮಿಂಚುತ್ತಿರುವ ಸೌರಭ್ ನಂದಾಲ್ ಹಾಗೂ ಮಹೇಂಧರ್ ಸಿಂಗ್ ಅವರ ಮೇಲೆ ಸಾಕಷ್ಟು ಭರವಸೆ ಇದೆ.