ಒರಾಂಗುಟಾನ್ ಪ್ರಾಣಿಗಳು ಭವ್ಯ ಜೀವಿಗಳು. ಅವುಗಳು ವಿನೋದ ಮತ್ತು ಪ್ರೀತಿಯಿಂದ ಕೂಡಿರುತ್ತವೆ. ಅವುಗಳು ಯಾರ ಮುಖದಲ್ಲಿ ಬೇಕಾದರೂ ನಗು ತರುತ್ತವೆ.
ಮೃಗಾಲಯವೊಂದರಲ್ಲಿನ 45 ವರ್ಷದ ಒರಾಂಗುಟಾನ್ ವೀಡಿಯೊವನ್ನು ಹಂಚಿಕೊಂಡಿದ್ದು ಅದು “ಸಿಲ್ಲಿಯೆಸ್ಟ್ ಒರಾಂಗುಟಾನ್”ಗಳಲ್ಲಿ ಒಂದಾಗಿದೆ.
ಅಮೆರಿಕಾದ ಸ್ಮಿತ್ಸೋನಿಯನ್ಸ್ ರಾಷ್ಟ್ರೀಯ ಮೃಗಾಲಯವು ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡ ವೀಡಿಯೊದಲ್ಲಿ, ಒರಾಂಗುಟಾನ್ ತನ್ನ ಕುಟುಂಬದ ಇತರ ಸದಸ್ಯರೊಂದಿಗೆ ಮೋಜು ಮಾಡುತ್ತಿರುವುದನ್ನು ಕಾಣಬಹುದು.
ಆಟವಾಡುವ ಒರಾಂಗುಟಾನ್ ತನ್ನ ತಲೆಯಿಂದ ಬಟ್ಟೆಯನ್ನು ತೆಗೆಯುವಾಗಲೆಲ್ಲಾ ಇತರ ಒರಾಂಗುಟನ್ ಪ್ರಾಣಿಗಳು ಅದರ ತಲೆಯ ಮೇಲೆ ಬಡಿಯುತ್ತವೆ. ಇದು ಎರಡು ಬಾರಿ ಮುಂದುವರಿಯುತ್ತದೆ ಮತ್ತು ವೀಕ್ಷಿಸಲು ತುಂಬಾ ತಮಾಷೆಯಾಗಿದೆ.
ಮೃಗಾಲಯವು ವೀಡಿಯೊದ ಶೀರ್ಷಿಕೆಯಲ್ಲಿ 45 ವರ್ಷ ವಯಸ್ಸಿನಲ್ಲಿ, ಬೋನಿ ನೀವು ಭೇಟಿಯಾಗುವ ಅತ್ಯಂತ ಮೂರ್ಖ ಒರಾಂಗುಟಾನ್ಗಳಲ್ಲಿ ಒಬ್ಬರು! ಎಂದು ಅವುಗಳ ಮೋಜನ್ನು ವಿವರಿಸಿದ್ದಾರೆ.