alex Certify BIG NEWS: 20 ಸಾವಿರ ಅಂಗನವಾಡಿ, 6 ಸಾವಿರ ಪ್ರಾಥಮಿಕ ಶಾಲೆಗಳಲ್ಲಿ ಡಿ. 25 ರಿಂದ NEP ಜಾರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: 20 ಸಾವಿರ ಅಂಗನವಾಡಿ, 6 ಸಾವಿರ ಪ್ರಾಥಮಿಕ ಶಾಲೆಗಳಲ್ಲಿ ಡಿ. 25 ರಿಂದ NEP ಜಾರಿ

ಮಂಗಳೂರು: ರಾಜ್ಯದ 20,000 ಅಂಗನವಾಡಿ ಮತ್ತು 6000 ಪ್ರಾಥಮಿಕ ಶಾಲೆಗಳಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ(ಎನ್.ಇ.ಪಿ.) ಜಾರಿಗೆ ಉದ್ದೇಶಿಸಲಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಬಿ.ಸಿ. ನಾಗೇಶ್ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಸೆಂಬರ್ 25 ರಂದು ಎನ್ಇಪಿ ಜಾರಿಗೆ ಉದ್ದೇಶಿಸಿದ್ದು, ಇದರ ರಾಜ್ಯ ಪಠ್ಯಕ್ರಮ ನವೆಂಬರ್ ಅಂತ್ಯಕ್ಕೆ ಬರಲಿದೆ ಎಂದು ಹೇಳಿದ್ದಾರೆ.

ರಾಜ್ಯ ಪಠ್ಯ ಪದ್ಧತಿ ನವೆಂಬರ್ ಅಂತ್ಯಕ್ಕೆ ಬರಲಿದ್ದು, ಸಿಲೆಬಸ್ ಪಠ್ಯಪುಸ್ತಕ ತಯಾರಿಸಲಾಗುವುದು. ಎನ್ಇಪಿ ವಿಶೇಷತೆ ಎಂದರೆ ಪಠ್ಯಪುಸ್ತಕಗಳನ್ನು ಹೇರುವುದಿಲ್ಲ. ಬದಲಾಗಿ ಪಠ್ಯದ ಹೊರೆ ಕಡಿಮೆಯಾಗಲಿದೆ. ಒಂದನೇ ಮತ್ತು ಎರಡನೇ ತರಗತಿಗೆ ಎರಡೆರಡು ಪುಸ್ತಕಗಳು ಇರುತ್ತವೆ. ಸಂಖ್ಯಾಶಾಸ್ತ್ರ ವಿಚಾರಗಳನ್ನು ತಿಳಿಸುವುದು, ಅಕ್ಷರ ಜ್ಞಾನ ನೀಡುವ ಪುಸ್ತಕ ಇರುತ್ತದೆ. ಈಗಾಗಲೇ ರಾಜ್ಯದ ಶಾಲೆಗಳಲ್ಲಿ ಮಕ್ಕಳಿಗೆ ಚಿಲಿಪಿಲಿ, ನಲಿ-ಕಲಿ ಮೂಲಕ ಎನ್ಇಪಿ ಆಶಯಗಳನ್ನು ಜಾರಿಗೊಳಿಸಲಾಗಿದೆ. ಅಂಗನವಾಡಿ ಶಿಕ್ಷಕಿಯರಿಗೆ ಎನ್‌ಇಪಿ ತರಬೇತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಶೀಘ್ರವೇ ಶಾಲೆಗಳಲ್ಲಿ ಧ್ಯಾನ, ಯೋಗ ಕ್ಲಾಸ್ ಆರಂಭಿಸಲಾಗುವುದು. ನೈತಿಕ ಶಿಕ್ಷಣ ಆರಂಭಿಸುವ ಬಗ್ಗೆ ಶಿಕ್ಷಣ ತಜ್ಞರ ಅಭಿಪ್ರಾಯ ಪಡೆಯಲಾಗುವುದು ಎಂದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...