ಹೈದರಾಬಾದ್ ನಲ್ಲಿ ಎರಡು ನಾಯಿಮರಿಗಳನ್ನು ಬರ್ಬರವಾಗಿ ಕೊಂದು ಅದರ ವಿಡಿಯೋವನ್ನು ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ವ್ಯಕ್ತಿ ಎರಡು ನಾಯಿಮರಿಗಳನ್ನು ನೇಣು ಹಾಕಿರುವ ಮತ್ತು ಕಟ್ಟಡದಿಂದ ಎಸೆದಿರುವ ವೀಡಿಯೊವನ್ನು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾನೆ.
ವ್ಯಕ್ತಿ ಮೊದಲ ನಾಯಿಮರಿಯನ್ನು ಮರಕ್ಕೆ ನೇತುಹಾಕಿ ಕೊಂದಿದ್ದಾನೆ ಮತ್ತು ಎರಡನೇ ನಾಯಿಮರಿಯನ್ನು ನಾಲ್ಕನೇ ಮಹಡಿಯಿಂದ ಎಸೆದಿದ್ದ.
ನವೆಂಬರ್ 15 ರಂದು ಇನ್‌ಸ್ಟಾಗ್ರಾಮ್ ನಲ್ಲಿ ಕೃತ್ಯದ ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಾಗ ಘಟನೆ ಬೆಳಕಿಗೆ ಬಂತು. ರಾಜೇಂದ್ರ ನಗರ ಪೊಲೀಸ್ ವ್ಯಾಪ್ತಿಯ ಕಟ್ಟೆದಾನಿ ನಿವಾಸಿ ರೇ ಎಂಬಾತ ಆರೋಪಿಯಾಗಿದ್ದಾನೆ. ಆರೋಪಿಯು ಸಮಾಜವಿರೋಧಿ ವರ್ತನೆಯ ಜೊತೆಗೆ ಮಾದಕ ದ್ರವ್ಯಗಳನ್ನು ಸೇವಿಸುತ್ತಾನೆಂದು ಪೊಲೀಸರು ಹೇಳಿದ್ದಾರೆ. ನವೆಂಬರ್ 18 ರಂದು ಮೈಲಾರ್‌ದೇವಪಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಾಣಿ ಹಿಂಸೆಯ ವರದಿಯನ್ನು ದಾಖಲಿಸಲಾಗಿದೆ.