ನಕಾರಾತ್ಮಕ ಶಕ್ತಿ ಮುಖ್ಯ ಬಾಗಿಲು, ಕಿಟಕಿ ಮೂಲಕ ಮನೆ ಪ್ರವೇಶ ಮಾಡುತ್ತದೆ. ಆದ್ದರಿಂದ ಮನೆಯ ಮುಖ್ಯ ಬಾಗಿಲನ್ನು ಸ್ವಚ್ಛವಾಗಿಡಬೇಕು. ಕಿಟಕಿ ಅಚ್ಚುಕಟ್ಟಾಗಿರಬೇಕು. ಅನೇಕರು ಮನೆಯ ಎಲ್ಲಾ ಭಾಗಗಳನ್ನು ಸ್ವಚ್ಛಗೊಳಿಸುತ್ತಾರೆ. ಆದ್ರೆ ಮನೆಯ ಮುಖ್ಯ ಗೇಟ್ ಮತ್ತು ಕಿಟಕಿಯನ್ನು ಸ್ವಚ್ಛಗೊಳಿಸಲು ಮರೆಯುತ್ತಾರೆ.
ಮನೆಯನ್ನು ಸ್ವಚ್ಛಗೊಳಿಸುವಾಗ ಮುಖ್ಯ ಬಾಗಿಲು ಮತ್ತು ಕಿಟಕಿಗಳಿಗೆ ವಿಶೇಷ ಗಮನ ಕೊಡುವುದು ಬಹಳ ಮುಖ್ಯ. ಮುಖ್ಯ ಗೇಟ್ ಜೊತೆಗೆ ಯಾವಾಗಲೂ ಅಡುಗೆ ಮನೆಯ ಮೂಲೆ ಮೂಲೆಗಳನ್ನು ಸ್ವಚ್ಛವಾಗಿಡಬೇಕು. ಇಲ್ಲದಿದ್ದರೆ ಅದು ಕುಟುಂಬದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
ಮನೆಯಲ್ಲಿರುವ ನಕಾರಾತ್ಮಕ ಶಕ್ತಿ ಓಡಿಸಲು ಮನೆಯಲ್ಲಿ ಧೂಪವನ್ನು ಹಚ್ಚಬೇಕು. ಧೂಪದ ಹೊಗೆ ಮನೆ ತುಂಬ ಹರಡಿದ್ರೆ ನಕಾರಾತ್ಮಕ ಶಕ್ತಿ ಪ್ರಭಾವ ಕಡಿಮೆಯಾಗುತ್ತದೆ.
ಮಲಗುವ ಕೋಣೆಗೆ ಉಪ್ಪು ನೀರನ್ನು ಸಿಂಪಡಿಸಿ. ಇದರಿಂದ ಧನಾತ್ಮಕ ಶಕ್ತಿಯನ್ನು ಕಾಪಾಡಿಕೊಳ್ಳಬಹುದು.
ನಕಾರಾತ್ಮಕ ಶಕ್ತಿಯನ್ನು ಹೋಗಲಾಡಿಸಲು ದೇವರ ಮನೆಯಲ್ಲಿ ಕನಿಷ್ಠ ಮೂರು ಬಾರಿ ಗಂಟೆ ಬಾರಿಸಿ. ಇದು ಮನೆಯ ಸಂತೋಷಕ್ಕೆ ಕಾರಣವಾಗುತ್ತದೆ.
ಮನೆಯ ಸ್ನಾನಗೃಹದ ಬಾಗಿಲನ್ನು ಯಾವಾಗಲೂ ಮುಚ್ಚಿ. ಶೌಚಾಲಯದ ಬಾಗಿಲು ತೆರೆದಿರುವುದರಿಂದ, ನಕಾರಾತ್ಮಕ ಶಕ್ತಿ ಮನೆ ಪ್ರವೇಶ ಮಾಡುತ್ತದೆ.