ಬಾಗಲಕೋಟೆ: ಬಿಜೆಪಿಗೆ ವೋಟ್ ಹಾಕದವರ ಹೆಸರು ಮತದಾರರ ಪಟ್ಟಿಯಿಂದ ಡಿಲೀಟ್ ಮಾಡಲಾಗಿದೆ ಎಂದು ಕಾಂಗ್ರೆಸ್ ಶಾಸಕ ಜಮೀರ್ ಅಹಮ್ಮದ್ ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ನಡೆದ ವೋಟರ್ ಐಡಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಗಲಕೋಟೆ ಜಿಲ್ಲೆಯ ಜಮಖಂಡಿಯಲ್ಲಿ ಮಾತನಾಡಿದ ಅವರು, ಖಾಸಗಿ ಕಂಪನಿಯಿಂದ ಬಿಜೆಪಿಯವರು ನಕಲಿ ಸರ್ವೆ ಮಾಡಿಸಿದ್ದಾರೆ. ಬಿಜೆಪಿಗೆ ಮತ ಹಾಕದ ಮತದಾರರ ಪಟ್ಟಿಯನ್ನು ಡಿಲೀಟ್ ಮಾಡಿಸಿದ್ದಾರೆ ಎಂದು ದೂರಿದ್ದಾರೆ.
ನನ್ನ ಕ್ಷೇತ್ರದಲ್ಲಿಯೇ 22,000 ಮತದಾರರ ಹೆಸರು ಡಿಲೀಟ್ ಆಗಿದೆ. ಬಿಜೆಪಿಗೆ ವೋಟ್ ಹಾಕದವರನ್ನು ಗುರುತಿಸಿ ಖಾಸಗಿ ಸರ್ವೇ ನಡೆಸುತ್ತಾರೆ. ನಂತರ ಮತದಾರರ ಪಟ್ಟಿಯಿಂದ ಅಂಥವರ ಹೆಸರನ್ನು ತೆಗೆಸಿ ಹಾಕಿದ್ದಾರೆ ಎಂದು ಜಮೀರ್ ಅಹ್ಮದ್ ಆರೋಪಿಸಿದ್ದಾರೆ.