ವಿಶ್ವದ ಅತ್ಯಂತ ಶ್ರೀಮಂತ ಟೂರ್ನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಫಿಫಾ ವಿಶ್ವಕಪ್ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಅರಬ್ ರಾಷ್ಟ್ರ ಕತಾರ್ ನಲ್ಲಿ ಫಿಫಾ ವಿಶ್ವಕಪ್ ನಡೆಯಲಿದ್ದು, ಹಲವು ಕಾರಣಗಳಿಗಾಗಿ ಇದು ವಿಶೇಷತೆ ಪಡೆದುಕೊಂಡಿದೆ.
ಫಿಫಾ ವಿಶ್ವಕಪ್ ಗಾಗಿ ಬರೋಬ್ಬರಿ 16.33 ಲಕ್ಷ ಕೋಟಿ ರೂಪಾಯಿಗಳನ್ನು ವೆಚ್ಚ ಮಾಡುತ್ತಿದ್ದು, ಕ್ರೀಡಾಂಗಣ ಮತ್ತು ಫುಟ್ಬಾಲ್ ಗೆ ಸಂಬಂಧಿಸಿದ ವ್ಯವಸ್ಥೆಯ ಜೊತೆಗೆ ಟೂರ್ನಿಯ ಕಾರಣಕ್ಕಾಗಿ ಕತಾರ್ ನಲ್ಲಿ ಕೈಗೊಳ್ಳಲಾದ ವಿವಿಧ ಮೂಲಸೌಕರ್ಯ ವೆಚ್ಚವೂ ಸಹ ಇದರಲ್ಲಿ ಸೇರಿದೆ.
ಈ ಹಿಂದಿನ ವಿಶ್ವ ಕಪ್ ಗಳಿಗೆ ಹೋಲಿಸಿದರೆ ಪಂದ್ಯಗಳ ಟಿಕೆಟ್ ಬೆಲೆಯೂ ಅತಿ ದುಬಾರಿಯಾಗಿದ್ದು, ಉದ್ಘಾಟನಾ ಪಂದ್ಯದ ಟಿಕೆಟ್ ಬೆಲೆ 5,600 – 17,900 ರೂಪಾಯಿಗಳೆಂದು ಹೇಳಲಾಗಿದೆ. ಇನ್ನು ಫೈನಲ್ ಪಂದ್ಯದ ಟಿಕೆಟ್ ದರ 49,400 ರೂಪಾಯಿಗಳಿಂದ 81,968 ರೂಪಾಯಿಗಳವರೆಗೆ ಇರಲಿದೆ.