alex Certify BIG NEWS: ಸಮುದ್ರ ಸ್ನಾನಕ್ಕಿಳಿದ ಇಬ್ಬರು ಮಕ್ಕಳ ಸಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಸಮುದ್ರ ಸ್ನಾನಕ್ಕಿಳಿದ ಇಬ್ಬರು ಮಕ್ಕಳ ಸಾವು

ಸಮುದ್ರಕ್ಕೆ ಇಳಿದ ಮಕ್ಕಳ ಪೈಕಿ ಇಬ್ಬರು ಮಕ್ಕಳು ನೀರಿನಲ್ಲಿ ಮುಳುಗಿದ್ದು ಮೂವರನ್ನು ರಕ್ಷಿಸಿರೋ ಘಟನೆ ಮಧ್ಯ ಮುಂಬೈನ ವರ್ಲಿ ಪ್ರದೇಶದಲ್ಲಿ ನಡೆದಿದೆ.

ಮೀನುಗಾರರ ಕಾಲೋನಿಯ ವರ್ಲಿ ಕೋಳಿವಾಡ ಬಳಿ ಮಧ್ಯಾಹ್ನ 3.30 ರ ಸುಮಾರಿಗೆ ಐದು ಮಕ್ಕಳ ಗುಂಪು ಆಟವಾಡುತ್ತಿದ್ದಾಗ ಸಮುದ್ರಕ್ಕೆ ಇಳಿದಾಗ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಧ್ಯಾಹ್ನ 3.40ರ ಸುಮಾರಿಗೆ ಅಗ್ನಿಶಾಮಕ ದಳಕ್ಕೆ ಕರೆ ಬಂದಿದ್ದು, ಕೂಡಲೇ ಸ್ಥಳಕ್ಕೆ ಧಾವಿಸಿದ್ದಾರೆ. ಅಷ್ಟರೊಳಗೆ ಸ್ಥಳೀಯರು ಮಕ್ಕಳನ್ನು ರಕ್ಷಿಸಿದ್ದರು ಎಂದು ತಿಳಿಸಿದರು.

ಮಕ್ಕಳನ್ನು ವಿವಿಧ ಆಸ್ಪತ್ರೆಗಳಿಗೆ ರವಾನಿಸಲಾಗಿದ್ದು, ಇಬ್ಬರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಾರ್ತಿಕ್ ಚೌಧರಿ (8) ಮತ್ತು ಸವಿತಾ ಪಾಲ್ (12) ದಾದರ್‌ನ ಹಿಂದೂಜಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಅವರು ಹೇಳಿದರು.
ಕಾರ್ತಿಕಿ ಗೌತಮ್ ಪಾಟೀಲ್ (13) ಅವರನ್ನು ಪರೇಲ್‌ನಲ್ಲಿರುವ ಕೆಇಎಂ ಆಸ್ಪತ್ರೆಗೆ ಸಾಗಿಸಲಾಗಿದ್ದು, ಆರ್ಯನ್ ಚೌಧರಿ (10) ಮತ್ತು ಓಂ ಪಾಲ್ (14) ಹಿಂದೂಜಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...