ಹಾಲು – 1/2 ಲೀಟರ್
ಅಕ್ಕಿ ಹಿಟ್ಟು – 2 ಚಮಚ
ಸಕ್ಕರೆ – 1/2 ಬಟ್ಟಲು
ಗೋಡಂಬಿ ಸ್ವಲ್ಪ
ದ್ರಾಕ್ಷಿ ಸ್ವಲ್ಪ
ಬಾದಾಮಿ ಸ್ವಲ್ಪ
ಏಲಕ್ಕಿ ಸ್ವಲ್ಪ
ಮಾಡುವ ವಿಧಾನ
ಮೊದಲಿಗೆ ಅರ್ಧ ಲೀಟರ್ ಹಾಲನ್ನು ಚೆನ್ನಾಗಿ ಕಾಯಿಸಿ ಅದಕ್ಕೆ ಸಕ್ಕರೆಯನ್ನು ಹಾಕಿ ಆರಲು ಬಿಡಬೇಕು. ನಂತರ ಸ್ವಲ್ಪ ಹಾಲಿಗೆ 2 ಚಮಚ ಅಕ್ಕಿ ಹಿಟ್ಟನ್ನು ಹಾಕಿ ಸ್ವಲ್ಪ ನೀರು ಹಾಕಿ ಕಲೆಸಿಕೊಳ್ಳಬೇಕು.
ನಂತರ ಹಾಲನ್ನು ಕುದಿಯಲು ಇಟ್ಟು ಹಾಲಿಗೆ ಅಕ್ಕಿ ಹಿಟ್ಟಿನ ಮಿಶ್ರಣ ಹಾಕಿ ಮತ್ತೆ 5 ನಿಮಿಷ ಕುದಿಸಬೇಕು. ನಂತರ ಒಂದು ಪಾತ್ರೆಯಲ್ಲಿ ಎರಡು ಚಮಚ ಸಕ್ಕರೆಯನ್ನು ಹಾಕಿ ಕ್ಯಾರಮಲ್ ಮಾಡಿಕೊಳ್ಳಬೇಕು. ಅಂದರೆ ಗಟ್ಟಿಯಾಗಿ ಸಕ್ಕರೆ ಪಾಕ ಮಾಡಿಕೊಳ್ಳಬೇಕು.
ಪಾಕಕ್ಕೆ ಅರ್ಧ ಬಟ್ಟಲು ಹಾಲನ್ನು ಹಾಕಿ ಕೈ ಆಡಿಸಿ. ಕುದಿಯುತ್ತಿರುವ ಹಾಲಿಗೆ ಮೊದಲೇ ಮಾಡಿಟ್ಟುಕೊಂಡ ಅಕ್ಕಿ ಹಿಟ್ಟಿನ ಮಿಶ್ರಣವನ್ನು ಹಾಕಿ ಮತ್ತೊಮ್ಮೆ 5 ನಿಮಿಷ ಕೈ ಆಡಿಸಬೇಕು.
ನಂತರ ಅದಕ್ಕೆ ಗೋಡಂಬಿ, ದ್ರಾಕ್ಷಿ, ಬಾದಾಮಿ, ಏಲಕ್ಕಿಯನ್ನು ಹಾಕಬೇಕು. ಈಗ ಹಾಲು ಸ್ವಲ್ಪ ಸ್ವಲ್ಪವೇ ನೊರೆ ಬರಲು ಪ್ರಾರಂಭವಾಗುತ್ತದೆ. ಸ್ವಲ್ಪ ಕುದಿಸಿದ ನಂತರ ರುಚಿಯಾದ ಕ್ಯಾರೆಮಲ್ ಪಾಯಸ ಸವಿಯಲು ಸಿದ್ಧ.