ನೀವು ಮಹೀಂದ್ರಾ ಎಕ್ಸ್ಯುವಿ 700 ಮತ್ತು ಮಹೀಂದ್ರಾ ಸ್ಕಾರ್ಪಿಯೊ-ಎನ್ ಖರೀದಿಸಬೇಕು ಎಂದುಕೊಂಡಿದ್ದೀರಾ? ಹಾಗಾದರೆ ಅವುಗಳನ್ನು ಖರೀದಿಸಲು ನೀವು ತುಂಬಾ ದಿನಗಳವರೆಗೆ ಕಾಯಬೇಕಾಗುತ್ತದೆ.
ಭಾರತದಲ್ಲಿ ಮಹೀಂದ್ರಾ ಅಂಡ್ ಮಹೀಂದ್ರಾ ಎಕ್ಸ್ಯುವಿ 700 ಮತ್ತು ಮಹೀಂದ್ರಾ ಸ್ಕಾರ್ಪಿಯೊ-ಎನ್ಗಾಗಿ ಕಾಯುವ ಅವಧಿಯನ್ನು ಬಹಿರಂಗಪಡಿಸಿದೆ. ಕಂಪನಿಯ ಪ್ರಕಾರ ಪ್ರಸ್ತುತ ಎರಡೂ SUV ಗಳಿಗೆ ಸರಾಸರಿ 18- 20 ತಿಂಗಳ ಕಾಲ ಕಾಯಬೇಕಾಗುತ್ತದೆ.
ನವೆಂಬರ್ 2022 ರ ಹೊತ್ತಿಗೆ ಮಹೀಂದ್ರಾ XUV 700 ಮತ್ತು ಮಹೀಂದ್ರಾ ಸ್ಕಾರ್ಪಿಯೋ-ಎನ್ಗಾಗಿ ಪ್ರತಿ ತಿಂಗಳು 8,000-9,000 ಬುಕಿಂಗ್ಗಳನ್ನು ಪಡೆಯುವುದನ್ನು ಮುಂದುವರೆಸಿದೆ ಎಂದು ಮಹೀಂದ್ರಾ ಹೇಳಿದೆ. ಈ ತಿಂಗಳಿಗೆ 2.60 ಲಕ್ಷಕ್ಕೂ ಹೆಚ್ಚು ಬುಕ್ಕಿಂಗ್ಗಳನ್ನು ತೆರೆದಿದೆ. ಬೇಡಿಕೆಯನ್ನು ಪೂರೈಸಲು ಉತ್ಪಾದನೆಯನ್ನು ಹೆಚ್ಚಿಸಲು ಯೋಜಿಸುತ್ತಿದೆ ಎಂದು ವಾಹನ ತಯಾರಕರು ತಿಳಿಸಿದ್ದಾರೆ.
ಇತ್ತೀಚೆಗೆ ಮಹೀಂದ್ರಾ & ಮಹೀಂದ್ರಾ ಈ ವರ್ಷದ ಸೆಪ್ಟೆಂಬರ್ನಲ್ಲಿ ತನ್ನ ಅತ್ಯಧಿಕ ಮಾಸಿಕ SUV ಬುಕಿಂಗ್ಗಳನ್ನು ನೋಂದಾಯಿಸಿದೆ ಎಂದು ಘೋಷಿಸಿತು. ಮಹೀಂದ್ರ ಥಾರ್, ಮಹೀಂದ್ರಾ ಎಕ್ಸ್ಯುವಿ 300, ಮಹೀಂದ್ರಾ ಎಕ್ಸ್ಯುವಿ 700, ಮಹೀಂದ್ರಾ ಬೊಲೆರೊ ಮತ್ತು ಮಹೀಂದ್ರಾ ಸ್ಕಾರ್ಪಿಯೊ-ಎನ್ ಹೆಚ್ಚು ಮಾರಾಟವಾಗುವ ಎಸ್ ಯು ವಿಗಳು ಹೆಚ್ಚಿನ ಸಂಖ್ಯೆಯ ಬುಕಿಂಗ್ಗಳನ್ನು ಹೊಂದಿವೆ.