ಶೃಂಗೇರಿ: ಅಕ್ರಮ ಆಸ್ತಿ ಗಳಿಕೆ ಹಾಗೂ ತೆರಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶೃಂಗೇರಿ ಕಾಂಗ್ರೆಸ್ ಶಾಸಕ ರಾಜೇಗೌಡ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ.
ಸಿ.ಪಿ.ವಿಜಯಾನಂದ ಎನ್ನುವವರು ಶಾಸಕರ ವಿರುದ್ಧ ಲೋಕಾಯುಕ್ತದಲ್ಲಿ ದೂರು ದಾಖಲಿಸಿದ್ದಾರೆ. ಮೆಸರ್ಸ್ ಶಾಬನ್ ರಂಜನ್ ಫರ್ಮ್ ಮೂಲಕ 75 ಕೋಟಿ ತೆರಿಗೆ ವಂಚನೆ ಹಾಗೂ ರಾಜೇಗೌಡ ಹಾಗೂ ಕುಟುಂಬದವರಿಂದ 200 ಕೋಟಿ ಅಕ್ರಮ ಆಸ್ತಿ ಸಂಪಾದನೆ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಶಾಸಕರು ತಮ್ಮ ಪ್ರಭಾವ ಬೀರಿ ತಮ್ಮ ಪತ್ನಿ ಹಾಗೂ ಮಗನ ಹೆಸರಲ್ಲಿ ಆಸ್ತಿಗಳನ್ನು ಮಾಡಿದ್ದಾರೆ. ಶಬಾನ್ ರಂಜನ್ ಟ್ರಸ್ಟ್ ಗೂ ಸೇರ್ಪಡೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.