ನೀರಿನಲ್ಲಿ ಕಾಣಿಸಿಕೊಳ್ಳುವ ಹಾವುಗಳು ಸಾಮಾನ್ಯವಾಗಿ ವಿಷಕಾರಿಯಲ್ಲ. ಆದರೆ ಸಿಟ್ಟುಬಂದಾಗ ಅವು ತಮ್ಮ ದೇಹವನ್ನು ಚಪ್ಪಟೆಗೊಳಿಸಿ ಕಚ್ಚುತ್ತವೆ. ಇಂಥ ಸಂದರ್ಭಗಳಲ್ಲಿ ಇದು ಮಾರಣಾಂತಿಕ ಅಲ್ಲದಿದ್ದರೂ ಹಾವುಗಳು ಕಚ್ಚಿದ ಸ್ಥಳದಲ್ಲಿ ರಕ್ತಸ್ರಾವ, ಊತ ಉಂಟಾಗುತ್ತವೆ, ಇಲ್ಲವೇ ಕೆಲವೊಂದು ಅಂಗಗಳಿಗೆ ಹಾನಿಯಾಗಬಹುದು.
ವ್ಯಕ್ತಿಯೊಬ್ಬನ ಮೇಲೆ ಇಂಥದ್ದೇ ಹಾವೊಂದು ದಾಳಿ ಮಾಡಿರುವ ವಿಡಿಯೋ ವೈರಲ್ ಆಗಿದೆ. ವ್ಯಕ್ತಿಯೊಬ್ಬ ನೀರಿನಿಂದ ಕಪ್ಪು ಹಾವನ್ನು ಎತ್ತಿಕೊಂಡಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಈ ಹಾವು ಹೆದರಿ ಆತನ ಮೇಲೆ ಹಲವು ಬಾರಿ ದಾಳಿ ನಡೆಸಿದೆ.
ಈ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ‘world_of_snakes_’ ಪುಟದಲ್ಲಿ ಶೇರ್ ಮಾಡಲಾಗಿದ್ದು, ನೋಡಲು ಬೆಚ್ಚಿಬೀಳಿಸುವಂತಿದೆ. ಹಾವು ವ್ಯಕ್ತಿಯ ಕೈಯ ಹಿಂಭಾಗದಲ್ಲಿ ಕಚ್ಚುತ್ತದೆ, ನಂತರ ಅವನು ಅದನ್ನು ಬೀಳಿಸುತ್ತಾನೆ. ನಂತರ ಮತ್ತೆ ಎತ್ತಿಕೊಳ್ಳುತ್ತಾನೆ.
ಇದು ಹಾವಿಗೆ ಇನ್ನಷ್ಟು ಸಿಟ್ಟು ತರಿಸಿದ್ದು, ಎರಡನೇ ಬಾರಿಗೆ ಕಚ್ಚುತ್ತದೆ. ನಂತರ ಅವನು ಅಂತಿಮವಾಗಿ ಹಾವನ್ನು ಬಿಡುತ್ತಾನೆ ಮತ್ತು ತನ್ನ ಗಾಯಗಳನ್ನು ಕ್ಯಾಮರಾಗೆ ತೋರಿಸುವುದನ್ನು ವಿಡಿಯೋದಲ್ಲಿ ನೋಡಬಹುದು. ಹಾವಿಗೆ ಹಿಂಸೆ ಕೊಟ್ಟಿರುವುದಕ್ಕೆ ಹಲವು ಕಮೆಂಟಿಗರು ವ್ಯಕ್ತಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.