ನ್ಯೂಯಾರ್ಕ್: ನೃತ್ಯವೆಂದರೆ ಹಾಗೆನೇ. ಯಾವುದಾದರೂ ಪ್ರಸಿದ್ಧ ಹಾಡು ಕೇಳಿಬರುತ್ತಿದ್ದರೆ ಸಾಕು, ತಂತಾನೆಯಾಗಿ ಕಾಲು ಹೆಜ್ಜೆಹಾಕಲು ಶುರುಮಾಡುತ್ತದೆ. ಅಂಥದ್ದೇ ಒಂದು ಅದ್ಭುತ ನೃತ್ಯದ ಅಪರೂಪದ ವಿಡಿಯೋ ಒಂದು ವೈರಲ್ ಆಗಿದೆ. ಇದು ಸೆಕ್ಯುರಿಟಿ ಗಾರ್ಡ್ ಫುಟ್ಬಾಲ್ ಮೈದಾನದಲ್ಲಿ ಮಾಡಿರುವ ನೃತ್ಯ
ವಿವಿಧ ಪಂದ್ಯಗಳಲ್ಲಿ ಆಟಗಾರರನ್ನು ಹುರಿದುಂಬಿಸಲು ಚಿಯರ್ ಗರ್ಲ್ಸ್ಗಳು ಇರುತ್ತಾರೆ. ನರ್ತಿಸುವ ಮೂಲಕ ಆಟಗಾರರನ್ನು ರಂಜಿಸುವುದು ಹಾಗೂ ಅವರಿಗೆ ಉತ್ತಮ ರೀತಿಯಲ್ಲಿ ಆಟವಾಡುವಂತೆ ಪ್ರೋತ್ಸಾಹ ನೀಡುವುದು ಈ ಯುವತಿಯರ ಉದ್ದೇಶ.
ಆದರೆ ಇಲ್ಲಿ ನಡೆದ ಘಟನೆಯೊಂದರಲ್ಲಿ ಅಮೆರಿಕದಲ್ಲಿ ನಡೆದ ಫುಟ್ಬಾಲ್ ಪಂದ್ಯದಲ್ಲಿ ಚಿಯರ್ ಗರ್ಲ್ಸ್ಗೆ ಅಡ್ಡಿಯಾಗಿ ನಿಂತಿದ್ದ ಸೆಕ್ಯುರಿಟಿ ಗಾರ್ಡ್ ತಾವೂ ಡಾನ್ಸ್ ಮಾಡಿದ್ದಾರೆ. ಈ ವಿಡಿಯೋವನ್ನು ಸ್ಪೋರ್ಟ್ಸ್ ಸೆಂಟರ್ ಅಕ್ಟೋಬರ್ ಶೇರ್ ಮಾಡಿಕೊಂಡಿದೆ. ‘ನಾವು ಇದನ್ನು ನಿರೀಕ್ಷಿಸಿರಲಿಲ್ಲ’ ಎಂದು ಶೀರ್ಷಿಕೆ ನೀಡಲಾಗಿದೆ.
ಮೊದಲಿಗೆ ಚಿಯರ್ಗರ್ಲ್ಸ್ಗೆ ಈ ಭದ್ರತಾ ಸಿಬ್ಬಂದಿ ಅಡ್ಡ ನಿಂತಿರುವುದು ವಿಡಿಯೋದಲ್ಲಿ ನೋಡಬಹುದು. ನಂತರ ಚಿಯರ್ ಲೀಡಿಂಗ್ ಸ್ಕ್ವಾಡ್ ತರಬೇತುದಾರ ಅಲ್ಲಿಗೆ ಬಂದು ಹೀಗೆ ಯುವತಿಯರ ಪ್ರದರ್ಶನಕ್ಕೆ ಅಡ್ಡಿಯಾಗಿ ನಿಲ್ಲಬೇಡಿ ಎಂದಿದ್ದಾರೆ. ಅಲ್ಲಿ ಸ್ವಲ್ಪ ಮಾತುಕತೆ ನಡೆದಿದೆ.
ಕೂಡಲೇ ಭದ್ರತಾ ಸಿಬ್ಬಂದಿ ತಾವೂ ನೃತ್ಯ ಮಾಡಿದ್ದಾರೆ. ಚೀರ್ ಲೀಡಿಂಗ್ ಸ್ಕ್ವಾಡ್ ತರಬೇತುದಾರರನ್ನೂ ಮೂಕವಿಸ್ಮಿತಗೊಳಿಸಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ಎರಡೇ ದಿನಗಳಲ್ಲಿ 1.28 ಕೋಟಿಗೂ ಅಧಿಕ ಮಂದಿ ಈ ವಿಡಿಯೋ ವೀಕ್ಷಿಸಿದ್ದು, 2.58 ಲಕ್ಷಕ್ಕೂ ಹೆಚ್ಚು ಲೈಕ್ಗಳೊಂದಿಗೆ ವಿಡಿಯೋ ವೈರಲ್ ಆಗಿದೆ.