alex Certify BIG NEWS: ಮೊಬೈಲ್, ಟ್ಯಾಬ್, ಲ್ಯಾಪ್ ಟಾಪ್ ಸೇರಿ ಎಲ್ಲಾ ಎಲೆಕ್ಟ್ರಾನಿಕ್ ವಸ್ತುಗಳಿಗೆ ಏಕರೂಪದ ಚಾರ್ಜರ್ ಬಳಕೆಗೆ ಕೇಂದ್ರ ಸರ್ಕಾರ ಅಸ್ತು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಮೊಬೈಲ್, ಟ್ಯಾಬ್, ಲ್ಯಾಪ್ ಟಾಪ್ ಸೇರಿ ಎಲ್ಲಾ ಎಲೆಕ್ಟ್ರಾನಿಕ್ ವಸ್ತುಗಳಿಗೆ ಏಕರೂಪದ ಚಾರ್ಜರ್ ಬಳಕೆಗೆ ಕೇಂದ್ರ ಸರ್ಕಾರ ಅಸ್ತು

ನವದೆಹಲಿ: ಎಲ್ಲಾ ಎಲೆಕ್ಟ್ರಾನಿಕ್ ವಸ್ತುಗಳಿಗೆ ಏಕರೂಪದ ಚಾರ್ಜರ್ ಅಳವಡಿಸಿಕೊಳ್ಳುವ ಕ್ರಮಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ.

ಆಂಡ್ರಾಯ್ಡ್ ಫೋನ್, ಐಒಎಸ್ ಫೋನ್, ಲ್ಯಾಪ್ಟಾಪ್ ಸೇರಿದಂತೆ ಎಲ್ಲಾ ಎಲೆಕ್ಟ್ರಾನಿಕ್ ವಸ್ತುಗಳಿಗೆ ಒಂದು ಚಾರ್ಜರ್ ಪಾಲಿಸಿ ಅಳವಡಿಸಿಕೊಳ್ಳುವ ಕ್ರಮಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ.

ಹಲವು ತಿಂಗಳಿನಿಂದ ದೇಶದಲ್ಲಿ ಏಕರೂಪದ ಚಾರ್ಜರ್ ಬಳಕೆ ನಿಯಮ ಚರ್ಚೆಯಲ್ಲಿತ್ತು. ಕೇಂದ್ರ ಸರ್ಕಾರದಿಂದ ರಚಿಸಲಾಗಿದ್ದ ಅಂತರ ಸಚಿವಾಲಯ ಕಾರ್ಯಪಡೆಯ ಸಭೆಯಲ್ಲಿ ಈ ಕುರಿತಾಗಿ ಒಮ್ಮತದ ನಿರ್ಧಾರ ಕೈಗೊಳ್ಳಲಾಗಿದೆ. ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ರೋಹಿತ್ ಕುಮಾರ್ ಸಿಂಗ್, ದೇಶದಲ್ಲಿ ಹಲವು ದಿನಗಳಿಂದ ಚರ್ಚೆಯಲ್ಲಿದ್ದ ಏಕರೂಪದ ಚಾರ್ಜರ್ ಬಳಕೆ ನಿಯಮಕ್ಕೆ ಒಪ್ಪಿಗೆ ಸಿಕ್ಕಿದೆ. ಉದ್ಯಮದ ಮಧ್ಯಸ್ಥಗಾರರು ಒಮ್ಮತದ ನಿರ್ಧಾರ ಕೈಗೊಂಡಿದ್ದಾರೆ. ಇನ್ನು ಮುಂದೆ ಭಾರತದಲ್ಲಿ ಮಾರಾಟವಾಗುವ ಎಲ್ಲಾ ಸ್ಮಾರ್ಟ್ ಡಿವೈಸ್ ಗಳಿಗೆ ಒಂದೇ ಮಾದರಿಯ ಚಾರ್ಜಿಂಗ್ ಪೋರ್ಟ್ ಇರಲಿದೆ ಎಂದು ಹೇಳಿದ್ದಾರೆ.

ಯುರೋಪ್ ಲ್ಲಿಯೂ ಶೀಘ್ರವೇ ಎಲ್ಲಾ ಗ್ಯಾಜೆಟ್ ಗಳು, ಯು.ಎಸ್.ಬಿ. –ಸಿ ಟೈಪ್ ಚಾರ್ಜರ್ ಹೊಂದಿರಬೇಕು ಎಂಬ ನಿಯಮ ಜಾರಿಯಾಗಲಿದೆ. ಆಪಲ್ ಕಂಪನಿ ಕೂಡ ಇದಕ್ಕೆ ಸಮ್ಮತಿಸಿದೆ. ಸ್ಮಾರ್ಟ್ ಫೋನ್ ಗಳು, ಕ್ಯಾಮೆರಾಗಳು, ಸ್ಮಾರ್ಟ್ ವಾಚ್ ಗಳು,  ಟ್ಯಾಬ್ ಗಳು, ಹೆಡ್ ಫೋನ್ ಗಳು, ಪೋರ್ಟಬಲ್ ಸ್ಪೀಕರ್, ಗೇಮ್ ಸಾಧನಗಳು  ಸೇರಿದಂತೆ ಎಲ್ಲಾ ಎಲೆಕ್ಟ್ರಾನಿಕ್ ಸಾಧನಗಳಿಗೂ ಒಂದೇ ಚಾರ್ಜರ್ ಬಳಸಲಾಗುವುದು ಎಂದು ಹೇಳಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...