ಬೆಂಗಳೂರು: ಗುಂಬಜ್ ಮಾದರಿಯ ಬಸ್ ನಿಲ್ದಾಣ ವಿವಾದ ವಿಚಾರವಾಗಿ ತಜ್ಞರ ಸಮಿತಿ ರಚನೆ ಮಾಡಲಾಗುವುದು ಎಂದು ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ, ಗುಂಬಜ್ ಮಾದರಿ ಬಸ್ ನಿಲ್ದಾಣ ಚರ್ಚೆ ವಿಚಾರವಾಗಿ ನಿನ್ನೆ ಶಾಸಕರಾದ ಎಸ್.ಎ.ರಾಮದಾಸ್ ಭೇಟಿಯಾಗಿ ಲಿಖಿತ ರೂಪದಲ್ಲಿ ಮನವಿ ಮಾಡಿದ್ದಾರೆ. ಸಮಿತಿ ರಚಿಸುವಂತೆ ಕೇಳಿದ್ದಾರೆ. ಏನು ಮಾಡಿದರೆ ಸರಿ ಎಂಬ ನಿಟ್ಟಿನಲ್ಲಿ ನಿರ್ಧರಿಸಲು ತಜ್ಞರ ಸಮಿತಿ ರಚಿಸಲಾಗುವುದು ಎಂದರು.
ಇಲ್ಲಿ ಭಿನ್ನಾಭಿಪ್ರಾಯ ಯಾಕೆ ಬಂತು ಎಂಬುದಕ್ಕಿಂತ ಏನು ಮಾಡಿದರೆ ಸರಿ ಎನ್ನುವ ಪ್ರಶ್ನೆ ಎದ್ದಿದೆ. ಹಾಗಾಗಿ ಪರಿಣತರು ಏನು ಹೇಳುತ್ತಾರೆ ಹಾಗೆ ಮಾಡುತ್ತೇವೆ. ಬಸ್ ನಿಲ್ದಾಣ ಪರಿಶೀಲನೆಗೆ ತಜ್ಞರ ಸಮಿತಿ ಕಳುಹಿಸುತ್ತೇನೆ ಎಂದು ಸ್ಪಷ್ಟಪಡಿಸಿದರು.