ಜಾತಕವಿಲ್ಲದೆ ಹೋದ್ರೂ ವ್ಯಕ್ತಿಯ ಭವಿಷ್ಯವನ್ನು ತಿಳಿಯಬಹುದು. ಇದಕ್ಕಾಗಿ ಸಂಖ್ಯಾಶಾಸ್ತ್ರದ ಸಹಾಯವನ್ನು ಪಡೆಯಬೇಕಾಗುತ್ತದೆ. ಸಂಖ್ಯಾಶಾಸ್ತ್ರದಲ್ಲಿ ವ್ಯಕ್ತಿಯ ಜನ್ಮ ದಿನಾಂಕದ ಆಧಾರದ ಮೇಲೆ ಆತನ ಭವಿಷ್ಯ ಹೇಳಲಾಗುತ್ತದೆ. ವ್ಯಕ್ತಿಯ ರಾಡಿಕ್ಸ್ ತಿಳಿದು ಆತನ ಬಗ್ಗೆ ಹೇಳಲಾಗುತ್ತದೆ.
ಸಂಖ್ಯಾಶಾಸ್ತ್ರದಲ್ಲಿ ರಾಡಿಕ್ಸ್ ತಿಳಿದುಕೊಳ್ಳಲು ಸುಲಭವಾದ ಮಾರ್ಗವೆಂದರೆ ವ್ಯಕ್ತಿಯ ಹುಟ್ಟಿದ ದಿನಾಂಕ. ಒಬ್ಬ ವ್ಯಕ್ತಿಯು ಯಾವುದೇ ತಿಂಗಳ 7, 16 ಅಥವಾ 25 ರಂದು ಜನಿಸಿದನೆಂದು ಭಾವಿಸೋಣ, ಆಗ ಅವನ ಸಂಖ್ಯೆ 7 ಆಗಿರುತ್ತದೆ. ಅದೇ ರೀತಿ ಒಬ್ಬ ವ್ಯಕ್ತಿಯ ಜನ್ಮ ದಿನಾಂಕದ ಅಂಕೆಗಳನ್ನು ಸೇರಿಸಿದಾಗ 7 ಬಂದರೆ ಆಗಲೂ ಅವನ ರಾಡಿಕ್ಸ್ 7 ಆಗಿರುತ್ತದೆ.
ಈ 7ರ ಸಂಖ್ಯೆ ಹೊಂದಿರುವ ಜನರು ತಾವಂದುಕೊಂಡ ಕೆಲಸ ಮಾಡಲು ಸಮರ್ಥರಾಗಿರುತ್ತಾರೆ. ಅವರು ಶ್ರಮಕ್ಕೆ ಹೆಚ್ಚು ಆದ್ಯತೆ ನೀಡ್ತಾರೆ. ತಮ್ಮ ಶ್ರಮದ ಮೂಲಕವೇ ಉನ್ನತ ಸ್ಥಾನಕ್ಕೆ ಏರುತ್ತಾರೆ. ಸರಳ ಸ್ವಭಾವದ ಇವರು ಉದಾರ ಗುಣ ಹೊಂದಿರುತ್ತಾರೆ.
ಹೃದಯವಂತರಾದ ಇವರು ಬೇರೆಯವರಿಗೆ ಸಹಾಯ ಮಾಡಲು ಸಿದ್ಧವಾಗಿರುತ್ತಾರೆ. ಇದೇ ಕಾರಣಕ್ಕೆ ಅವರು ವಂಚನೆಗೊಳಗಾಗುವುದು ಹೆಚ್ಚು. ಇವರು ಹುಟ್ಟಿನಿಂದಲೇ ಅದೃಷ್ಟವಂತರು. ಬಡ ಕುಟುಂಬದಲ್ಲಿ ಜನಿಸಿದ್ರೂ ಇವರ ಜನನದ ನಂತ್ರ ಕುಟುಂಬ ಏಳ್ಗೆ ಕಾಣುತ್ತದೆ. ಆರ್ಥಿಕ ವೃದ್ಧಿಯಾಗುತ್ತದೆ. ಎಲ್ಲ ಕ್ಷೇತ್ರಕ್ಕೆ ಪ್ರಗತಿ ಸಾಧಿಸುವ ಶಕ್ತಿಯನ್ನು ಇವರು ಹೊಂದಿದ್ದಾರೆ. ರಾಜಕೀಯದಲ್ಲಿ ಇವರಿಗೆ ಆಸಕ್ತಿ ಹೆಚ್ಚು.