ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆಯಲ್ಲಿ ವಿವಾದ ಸೃಷ್ಟಿಯಾಗಿದೆ. ಮಹಾರಾಷ್ಟ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಗೀತೆ ಜನಗಣಮನದ ಬದಲು ಬೇರೊಂದು ಗೀತೆಯನ್ನು ಪ್ರಸಾರ ಮಾಡಿರುವುದು ಆಕ್ಷೇಪಕ್ಕೆ ಗುರಿಯಾಗಿದೆ.
ವಶೀಮ್ನಲ್ಲಿ ಭಾಷಣ ಮಾಡಿದ ರಾಹುಲ್ ಗಾಂಧಿ ಕೊನೆಯಲ್ಲಿ ರಾಷ್ಟ್ರಗೀತೆ ಪ್ರಸಾರದ ಬಗ್ಗೆ ಮೈಕ್ನಲ್ಲಿ ಪ್ರಕಟಿಸಿದ್ರು. ಜನಗಣಮನಕ್ಕೆ ಗೌರವ ಸಲ್ಲಿಸಲು ಸಜ್ಜಾಗಿ ನಿಂತರು. ಆದ್ರೆ ರಾಷ್ಟ್ರಗೀತೆಯ ಬದಲು ಬೇರೊಂದು ಹಾಡನ್ನು ಪ್ರಸಾರ ಮಾಡಲಾಯ್ತು. ಈ ಬಗ್ಗೆ ರಾಹುಲ್ ಗಾಂಧಿ ಪ್ರಶ್ನಿಸಿದ ಬಳಿಕ ಜನಗಣಮನವನ್ನು ಪ್ರಸಾರ ಮಾಡಿದ್ದಾರೆ.
ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಕಾಂಗ್ರೆಸ್ನ ಭಾರತ್ ಜೋಡೋ ಯಾತ್ರೆ 71ನೇ ದಿನಕ್ಕೆ ಕಾಲಿಟ್ಟಿದೆ. ಸಪ್ಟೆಂಬರ್ 7 ರಂದು ತಮಿಳುನಾಡಿನ ಕನ್ಯಾಕುಮಾರಿಯಿಂದ ಈ ಪಾದಯಾತ್ರೆಯನ್ನು ಆರಂಭಿಸಲಾಗಿತ್ತು. ನವೆಂಬರ್ 7ರಂದು ಭಾರತ್ ಜೋಡೋ ಯಾತ್ರೆ ಮಹಾರಾಷ್ಟ್ರ ತಲುಪಿತ್ತು. ಕೈ ನಾಯಕರು ನಾಂದೇಡ್ ಜಿಲ್ಲೆಗೆ ಆಗಮಿಸಿದ್ದರು. ಸದ್ಯ ಪಾದಯಾತ್ರೆ ಮಹಾರಾಷ್ಟ್ರದ ಅಲೋಕ ಜಿಲ್ಲೆಯಿಂದ ಮುಂದಕ್ಕೆ ಸಾಗಿದೆ. ನವೆಂಬರ್ 20ರಂದು ಮಧ್ಯಪ್ರದೇಶಕ್ಕೆ ತಲುಪಲಿದೆ.