ಬೆಂಗಳೂರು- ಕೋಲಾರದಿಂದ ಸಿದ್ದರಾಮಯ್ಯ ಸ್ಪರ್ಧೆ ಮಾಡ್ತಾರೆ ಅನ್ನೋ ವಿಚಾರ ಒಂದು ಕಡೆಯಾದ್ರೆ ಮತ್ತೊಂದು ಕಡೆ ಸ್ವಪಕ್ಷದಲ್ಲೇ ಅವರಿಗೆ ಸೋಲಿನ ಭೀತಿ ಇದೆ ಎಂದು ಹೇಳಲಾಗುತ್ತಿದೆ. ಈ ಬೆನ್ನಲ್ಲೇ ಮಾಜಿ ಸಂಸದ ಮುನಿಯಪ್ಪ ನೀಡಿರುವ ಹೇಳಿಕೆ ಇದಕ್ಕೆ ಇನ್ನಷ್ಟು ಪುಷ್ಟಿ ನೀಡ್ತಾ ಇದೆ.
ಹೌದು, ಇಂದು ಬೆಂಗಳೂರಿನಲ್ಲಿ ಮಾತನಾಡಿದ ಕೇಂದ್ರ ಮಾಜಿ ಸಚಿವ ಕೆ.ಹೆಚ್. ಮುನಿಯಪ್ಪ, ಸಿದ್ದರಾಮಯ್ಯ ಜೊತೆ ಮಾತಾಡಿದ್ದೇನೆ. ಅವರನ್ನು ಸ್ವಾಗತ ಮಾಡಿದ್ದೇನೆ. ಆದರೆ ಅಲ್ಲಿ ಸ್ವಲ್ಪ ಭಿನ್ನಾಭಿಪ್ರಾಯವಿದೆ. ಅದನ್ನು ಸರಿ ಮಾಡಬೇಕು ಎಂದು ಹೇಳಿದ್ದೇನೆ. ಸಿದ್ದರಾಮಯ್ಯ ಅದನ್ನು ಮಾಡ್ತಾರೆ. ಅದರ ಬಗ್ಗೆ ಅಧ್ಯಕ್ಷರು, ಸಿಎಲ್ಪಿಯವರು ತೀರ್ಮಾನ ಮಾಡುತ್ತಾರೆ ಎಂದರು.
ಇನ್ನು ನಾವೆಲ್ಲ ಒಂದಾಗಿ ಕೆಲಸ ಮಾಡಿದ್ರೆ ಗೆಲ್ಲಲು ಕಷ್ಟವಿಲ್ಲ. ಹೋದ ಬಾರಿ ಬಿಜೆಪಿ ಅವರು ಮುಂದಾಳತ್ವದಲ್ಲಿ ಕೆಲಸ ಮಾಡಿದ್ರೆ ಗೆಲುವು ಕಷ್ಟ ಆಗುತ್ತದೆ. ಕಾಂಗ್ರೆಸ್ ನಲ್ಲಿ ಅವರನ್ನು ಸೋಲಿಸಲು ಸಂಚು ಮಾಡುತ್ತಿಲ್ಲ. ಆದರೆ ಮೂಲ ಕಾಂಗ್ರೆಸ್ ನವರು ಯಾರು ಇದ್ದಾರೆ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದರು. ಒಟ್ನಲ್ಲಿ ಸಿದ್ದರಾಮಯ್ಯ ಕೋಲಾರ ಸ್ಪರ್ಧೆ ಒಂದು ರೀತಿ ಕಬ್ಬಿಣದ ಕಡಲೆಯಾಗಿದೆ ಅಂದರೆ ತಪ್ಪಾಗಲ್ಲ.