ಆರು ತಿಂಗಳ ಹಿಂದೆ ತನ್ನ ಲಿವ್ ಇನ್ ಸಂಗಾತಿ ಶ್ರದ್ಧಾ ವಾಕರ್ ಅವರನ್ನು ಕೊಂದು ಕಾಡಿನಲ್ಲಿ ಚೆಲ್ಲಾಪಿಲ್ಲಿಯಾಗಿ ಎಸೆದ ಆರೋಪಿ ಅಫ್ತಾಬ್ ಪೂನಾವಾಲಾ ತನ್ನ ಸುಳ್ಳಿನಿಂದಾಗೇ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಅವನ ಸಂಚೇ ಕೊಲೆ ಜಾಡನ್ನು ಪತ್ತೆಹಚ್ಚಲು ಕಾರಣವಾಗಿದೆ.
ಮೊದಲಿಗೆ ಶ್ರದ್ಧಾ ವಾಕರ್ ಅವರ ತಂದೆ ಕಳೆದ ತಿಂಗಳು ಮಗಳ ನಾಪತ್ತೆ ಬಗ್ಗೆ ಮುಂಬೈ ಬಳಿಯ ವಸೈನಲ್ಲಿ ಪೊಲೀಸರ ಬಳಿ ಹೋದ ನಂತರ, ಅಕ್ಟೋಬರ್ 26 ರಂದು ಅಫ್ತಾಬ್ ಪೂನಾವಾಲಾ ಅವರನ್ನು ವಿಚಾರಣೆಗೆ ಕರೆಯಲಾಯಿತು. ಈ ವೇಳೆ ಅವಳು ಮೇ 22 ರಂದು ಜಗಳವಾಡಿದ ನಂತರ ದೆಹಲಿಯ ಮೆಹ್ರೌಲಿಯಲ್ಲಿರುವ ತಮ್ಮ ಬಾಡಿಗೆ ಫ್ಲಾಟ್ ಅನ್ನು ತೊರೆದಿದ್ದಾಳೆ ಎಂದು ಪೊಲೀಸರಿಗೆ ತಿಳಿಸಿದ್ದ. ಅವಳು ತನ್ನ ಮೊಬೈಲ್ ಫೋನ್ ಅನ್ನು ಮಾತ್ರ ತೆಗೆದುಕೊಂಡು ಹೋಗಿದ್ದಾಳೆ. ಬಟ್ಟೆ ಮತ್ತು ಇತರ ವಸ್ತುಗಳನ್ನು ಬಿಟ್ಟು ಹೋಗಿದ್ದಾಳೆಂದಿದ್ದ.
ಆದರೆ ಅದಕ್ಕೂ ನಾಲ್ಕು ದಿನಗಳ ಮೊದಲು ಅವನು ಶ್ರದ್ಧಾಳನ್ನು ಕೊಲೆ ಮಾಡಿದ್ದ. ಅವರು ದೆಹಲಿಗೆ ತೆರಳಿದ ಕೇವಲ ಎರಡು ವಾರಗಳ ನಂತರ ಕೊಲೆ ಮಾಡಿದ್ದು ವಿಚಾರಣೆಯಲ್ಲಿ ಪತ್ತೆಯಾಗಿದೆ.
ಫೋನ್ ಮಾತ್ರ ತೆಗೆದುಕೊಂಡು ಹೋಗಿದ್ದಾಳೆಂದು ಅಫ್ತಾಬ್ ಹೇಳಿದ್ದು ತನಿಖಾಧಿಕಾರಿಗಳು ಆಕೆಯ ಫೋನ್ ಚಟುವಟಿಕೆ, ಕರೆ ವಿವರಗಳು ಮತ್ತು ಸಿಗ್ನಲ್ ಸ್ಥಳವನ್ನು ಟ್ರ್ಯಾಕ್ ಮಾಡಿದರು. ಈ ವೇಳೆ ಪತ್ತೆಯಾಗಿದ್ದೇನೆಂದರೆ, ಮೇ 22 ಮತ್ತು 26 ರ ನಡುವೆ ಶ್ರದ್ಧಾ ವಾಕರ್ ಫೋನ್‌ನಲ್ಲಿರುವ ಬ್ಯಾಂಕಿಂಗ್ ಅಪ್ಲಿಕೇಶನ್ ಬಳಸಿ ಅವಳ ಖಾತೆಯಿಂದ ಅಫ್ತಾಬ್ ಪೂನಾವಾಲಾ ಖಾತೆಗೆ 54,000 ರೂಪಾಯಿಯನ್ನು ವರ್ಗಾಯಿಸಲಾಗಿತ್ತು ಎಂಬುದನ್ನ ಪೊಲೀಸರು ಕಂಡುಕೊಂಡರು. ಅವರು ಒಟ್ಟಿಗೆ ಇರುತ್ತಿದ್ದ ಮೆಹ್ರೌಲಿ ಪ್ರದೇಶದಿಂದ ಹಣ ವರ್ಗಾವಣೆಯಾಗಿತ್ತು.
ಮೇ 22 ರಂದು ಅವಳು ಹೋದಾಗಿನಿಂದ ತಾನು ಅವಳೊಂದಿಗೆ ಸಂಪರ್ಕದಲ್ಲಿಲ್ಲ ಎಂದು ಅವನು ಪೊಲೀಸರಿಗೆ ಹೇಳಿದ್ದರಿಂದ ಇದು ಅನುಮಾನಗಳನ್ನು ಹೆಚ್ಚಿಸಿತು.
ಈ ತಿಂಗಳ ಆರಂಭದಲ್ಲಿ ಅವನನ್ನು ಮತ್ತೆ ವಿಚಾರಣೆಗೆ ಕರೆಯಲಾಯಿತು. ಆಗ ಆಕೆಯ ಪಾಸ್‌ವರ್ಡ್‌ಗಳು ತನಗೆ ಗೊತ್ತಿದ್ದರಿಂದ ಹಣ ವರ್ಗಾವಣೆ ಮಾಡಿಕೊಂಡಿದ್ದಾಗಿ ಪೊಲೀಸರಿಗೆ ತಿಳಿಸಿದ್ದ.
ಪೊಲೀಸರು ಏತನ್ಮಧ್ಯೆ ಅವನು ಶ್ರದ್ಧಾಳ ಸ್ನೇಹಿತರೊಂದಿಗೆ ಚಾಟ್ ಮಾಡಲು ಆಕೆಯ Instagram ಖಾತೆಯನ್ನು ಬಳಸಿದ್ದಾನೆ ಎಂದು ಕಂಡುಕೊಂಡರು. ಮೇ 31 ರಂದು ಮಾಡಿದ್ದ ಚಾಟ್‌ಗಳಲ್ಲಿ ಫೋನ್‌ನ ಸ್ಥಳವನ್ನು ಮತ್ತೆ ಮೆಹ್ರಾಲಿ ಎಂದು ತೋರಿಸಿತ್ತು. ಆಗ ವಸೈನ ಮಾಣಿಕಪುರ ಪೊಲೀಸ್ ಠಾಣೆಯ ಅಧಿಕಾರಿಗಳು ನಂತರ ದೆಹಲಿ ಪೊಲೀಸರನ್ನು ಸಂಪರ್ಕಿಸಿದರು. ಅವರು ಆರೋಪಿ ಅಫ್ತಾಬ್ ನನ್ನು ಬಂಧಿಸಿ ಪ್ರಕರಣವನ್ನು ಭೇದಿಸುವ ಪ್ರಶ್ನೆಯನ್ನು ಕೇಳಿದರು. ನಂತರ ಆತ ಭಯಾನಕ ಅಂಶಗಳನ್ನು ಬಾಯ್ಬಿಟ್ಟನು.
ಅವರು 18 ದಿನಗಳ ಕಾಲ ವಾಸವಿದ್ದ ತಮ್ಮ ಬಾಡಿಗೆ ಫ್ಲಾಟ್‌ನ ಸಮೀಪವಿರುವ ಕಾಡಿನಲ್ಲಿ ಎಸೆದ ಆಕೆಯ ದೇಹದ 35 ತುಂಡುಗಳಲ್ಲಿ ಕನಿಷ್ಠ 10 ತುಂಡುಗಳನ್ನು ಪೊಲೀಸರು ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ.