ತನ್ನ ಮೇಕೆಗಳು ಮಳೆಯಲ್ಲಿ ನೆನೆಯಬಾರದೆಂದು ಮೇಕೆ ಸಾಕುವ ವ್ಯಕ್ತಿ ಅವುಗಳಿಗೆ ತಾತ್ಕಾಲಿಕ ರೇನ್ ಕೋಟ್ ಗಳನ್ನು ಮಾಡಿದ್ದಾರೆ. ಪ್ರಾಣಿಗಳ ಬಗ್ಗೆ ಆತನಿಗಿರುವ ಪ್ರೀತಿ ಕಂಡು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ತಮಿಳುನಾಡಿನ ತಂಜಾವೂರಿನ ಕುಲಮಂಗಲಂ ಗ್ರಾಮದ ರೈತರೊಬ್ಬರು ತಮ್ಮ ಮೇಕೆಗಳಿಗೆ ತಿರುಗಾಟದ ಸಮಯದಲ್ಲಿ ಮೇಯಿಸಲು ತಾತ್ಕಾಲಿಕ ರೈನ್‌ಕೋಟ್‌ಗಳನ್ನು ರಚಿಸಿದ್ದಾರೆ. ರೈತನನ್ನು 70 ವರ್ಷದ ಗಣೇಶನ್ ಎಂದು ಗುರುತಿಸಲಾಗಿದ್ದು, ತನ್ನ ಜಮೀನಿನಲ್ಲಿ ಅವರು ಹಸುಗಳು ಮತ್ತು ಕೋಳಿಗಳನ್ನು ಸಹ ಸಾಕುತ್ತಾರೆ.
ಗಣೇಶನ್ ತನ್ನ ಪ್ರಾಣಿಗಳ ಜೊತೆ ಆತ್ಮೀಯರಾಗಿದ್ದಾರೆ. ಮಳೆಗಾಲದ ಕಾರಣ ನಿರಂತರವಾಗಿ ಮಳೆಯಾಗುತ್ತಿದ್ದರಿಂದ ತನ್ನ ಮೇಕೆಗಳು ಮೇಯುವಾಗ ವಿಪರೀತ ಚಳಿ ಮತ್ತು ನಡುಗುತ್ತಿದ್ದುದನ್ನು ಅವರು ಗಮನಿಸಿದರು.
ಅವುಗಳು ಮಳೆಯಲ್ಲಿ ನೆನೆಯದಂತೆ ಮತ್ತು ಚಳಿಯಲ್ಲಿ ನಡುಗದಂತೆ ನಿರ್ಧರಿಸಿದ ಗಣೇಶನ್ ತಮ್ಮ ಮೇಕೆಗಳಿಗೆ ಅಕ್ಕಿ ಚೀಲಗಳನ್ನು ರೈನ್‌ಕೋಟ್‌ಗಳಾಗಿ ಪರಿವರ್ತಿಸಿದರು. ಆರಂಭದಲ್ಲಿ ಗ್ರಾಮಸ್ಥರಿಗೆ ಇದು ವಿಚಿತ್ರ ಅನಿಸಿದ್ರೂ ಮೇಕೆಗಳ ಬಗ್ಗೆ ಗಣೇಶನ ಕಾಳಜಿಯನ್ನು ಶ್ಲಾಘಿಸಿದರು.