ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ಮಲಿಕ್ ವಿಚ್ಛೇದನ ವದಂತಿಯ ಬೆನ್ನಲ್ಲೇ ಒಂದೊಂದೇ ರಹಸ್ಯಗಳು ಬಯಲಾಗುತ್ತಿವೆ. 2010ರಲ್ಲಿ ಶೋಯೆಬ್ ಹಾಗೂ ಸಾನಿಯಾ ವಿವಾಹ ನೆರವೇರಿತ್ತು. ಈ ಇಂಡೋ-ಪಾಕಿಸ್ತಾನಿ ಮದುವೆ ಸಾಕಷ್ಟು ಚರ್ಚೆಗೂ ಗ್ರಾಸವಾಗಿತ್ತು
ಇವರ ದಾಂಪತ್ಯಕ್ಕೀಗ 12 ವರ್ಷಗಳು. ಈಗ ಸಾನಿಯಾ-ಶೋಯೆಬ್ ಮದುವೆ ಮುರಿದು ಬಿದ್ದಿದೆ ಅನ್ನೋ ಮಾತುಗಳು ಕೇಳಿಬರ್ತಿವೆ. ಸಾನಿಯಾಗಿಂತ ಮೊದಲು ಶೋಯೆಬ್ ತಮ್ಮ ಅಭಿಮಾನಿಯೊಬ್ಬಳನ್ನು ಫೋನ್ ಮೂಲಕ ಮದುವೆಯಾಗಿದ್ದರು. ಮುಸ್ಲಿಂ ಸಂಪ್ರದಾಯದಂತೆ ನಿಕಾಹ್ ಮಾಡಿಕೊಂಡಿದ್ದರು. ಆದರೆ ಆ ಮದುವೆಯಲ್ಲಿ ಶೋಯೆಬ್‌ಗೇ ಮೋಸವಾಗಿತ್ತು.
2001ರಲ್ಲಿ ಆಯೇಷಾ ಎಂಬ ಹುಡುಗಿ ಶೋಯೆಬ್‌ಗೆ ಕರೆ ಮಾಡಿ ತಾನು ನಿಮ್ಮ ಕಟ್ಟಾ ಅಭಿಮಾನಿ ಎಂದು ಪರಿಚಯಿಸಿಕೊಂಡಿದ್ದಳಂತೆ. ಈ ವಿಚಾರವನ್ನು ಸ್ವತಃ ಶೋಯೆಬ್ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದರು. ತಾನು ಸೌದಿ ಅರೇಬಿಯಾ ನಿವಾಸಿಯೆಂದು ಆಕೆ ಹೇಳಿದ್ದಳು. ಕ್ರಮೇಣ ಇವರಿಬ್ಬರ ಪರಿಚಯ ಪ್ರೀತಿಯಾಗಿ ಬದಲಾಗಿತ್ತು. ಶೋಯೆಬ್ ಈ ಬಗ್ಗೆ ಮನೆಯವರಿಗೂ ತಿಳಿಸಿದ್ದರು. ಆದ್ರೆ ಆಯೇಷಾ ಮಾತ್ರ ಶೋಯೆಬ್‌ರನ್ನು ಭೇಟಿಯಾಗಲು ಸಿದ್ಧಳಿರಲಿಲ್ಲ. ಕೊನೆಗೊಮ್ಮೆಶೋಯೆಬ್‌ಗೆ ಕರೆ ಮಾಡಿ ಫೋನ್‌ನಲ್ಲಿ ಮದುವೆಯಾಗಲು ಬಯಸುವುದಾಗಿ ತಿಳಿಸಿದ್ಲು.
ಅದರಂತೆ ಶೋಯೆಬ್ ಫೋನ್‌ನಲ್ಲೇ ಆಯೇಷಾ ಜೊತೆಗೆ ನಿಕಾಹ್ ಮಾಡಿಕೊಂಡರು. ಆದರೆ ಆ ಮಹಿಳೆ ಶೋಯೆಬ್‌ಗೆ ಬೇರೆ ಯಾರದ್ದೋ ಫೋಟೋ ತೋರಿಸಿ ತಾನೇ ಎಂದು ಹೇಳಿಕೊಂಡು ವಂಚಿಸಿದ್ದಳು. ಮಹಾ ಸಿದ್ದಿಕಿ ಎಂಬುದು ಆಕೆಯ ಅಸಲಿ ಹೆಸರು, ತಾನು ಶೋಯೆಬ್ ಪತ್ನಿಯೆಂದು ಹೇಳಿಕೊಂಡು ತಿರುಗುತ್ತಿದ್ದಳು. ತಾನು ಮೋಸ ಹೋಗಿರುವುದನ್ನು ಅರಿತ ಶೋಯೆಬ್, ಮಹಿಳೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕೊನೆಗೆ ತಪ್ಪೊಪ್ಪಿಕೊಂಡ ಆ ಮಹಿಳೆ ಶೋಯೆಬ್‌ಗೆ ವಿಚ್ಛೇದನ ಕೂಡ ನೀಡಿದ್ದಳು. ಸಾನಿಯಾರನ್ನು ಮದುವೆಯಾಗುವ ಮೊದಲು ಶೋಯೆಬ್ ಈ ಮಹಿಳೆಯಿಂದ ವಿಚ್ಛೇದನ ಪಡೆದಿದ್ದರು.