alex Certify ಕೆಮಿಕಲ್‌ಯುಕ್ತ ಕಾಯಿಲ್‌ಗಳು ಬೇಡ, ಬರೀ 2 ರೂಪಾಯಿ ಕರ್ಪೂರ ಇದ್ದರೆ ಸೊಳ್ಳೆಗಳಿಂದ ಸಿಗುತ್ತೆ ಮುಕ್ತಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೆಮಿಕಲ್‌ಯುಕ್ತ ಕಾಯಿಲ್‌ಗಳು ಬೇಡ, ಬರೀ 2 ರೂಪಾಯಿ ಕರ್ಪೂರ ಇದ್ದರೆ ಸೊಳ್ಳೆಗಳಿಂದ ಸಿಗುತ್ತೆ ಮುಕ್ತಿ….!

ಸೊಳ್ಳೆ ಕಡಿತವು ಅನೇಕ ಅಪಾಯಕಾರಿ ಕಾಯಿಲೆಗಳಿಗೆ ಕಾರಣವಾಗಬಹುದು. ಮಳೆ, ಬಿಸಿಲು ಹೀಗೆ ವಾತಾವರಣ ಬದಲಾದಂತೆಯೂ ಸೊಳ್ಳೆಗಳ ಕಾಟ ಹೆಚ್ಚು. ನಾವು ಸೊಳ್ಳೆಗಳನ್ನು ಓಡಿಸಲು ಕೆಮಿಕಲ್‌ಯುಕ್ತ ಕಾಯಿಲ್‌ಗಳನ್ನು ಬಳಸ್ತೇವೆ. ಅದು ನಮ್ಮ ಆರೋಗ್ಯಕ್ಕೂ ಹಾನಿಕರ. ಸೊಳ್ಳೆ ನಿವಾರಕ ಅಗರಬತ್ತಿ ಅಥವಾ ರಾಸಾಯನಿಕಗಳ ಹೊಗೆಯಿಂದ ಮಕ್ಕಳು ಮತ್ತು ವೃದ್ಧರು ಉಸಿರಾಡಲು ಕಷ್ಟಪಡುತ್ತಾರೆ. ಸೊಳ್ಳೆಗಳಿಂದ ಪಾರಾಗಲು ಪರದೆಗಳು, ಕ್ರೀಮ್‌, ಸೊಳ್ಳೆ ನಿವಾರಕಗಳನ್ನು ಬಳಸುತ್ತಾರೆ. ಆದ್ರೆ ಸೊಳ್ಳೆ ಕಾಟ ಮಾತ್ರ ತಪ್ಪುವುದೇ ಇಲ್ಲ. ಕೇವಲ 10 ರೂಪಾಯಿ ಖರ್ಚು ಮಾಡಿ ನಾವು ಸುಲಭವಾಗಿ ಸೊಳ್ಳೆಗಳನ್ನು ಓಡಿಸುವ ಅಧ್ಭುತವಾದ ಉಪಾಯವಿದೆ. ಇವೆಲ್ಲವೂ ಸೊಳ್ಳೆ ಓಡಿಸುವ ಮನೆಮದ್ದುಗಳು.

ಬೇವು: ಬೇವಿನ ಎಲೆಗಳನ್ನು ಪ್ರಾಚೀನ ಕಾಲದಿಂದಲೂ ಸೊಳ್ಳೆಗಳನ್ನು ಓಡಿಸಲು ಬಳಸಲಾಗುತ್ತಿದೆ. ಹಳ್ಳಿಗಳಲ್ಲಿ ಬೇವಿನ ಸೊಪ್ಪನ್ನು ಸುಟ್ಟು ಸೊಳ್ಳೆಗಳು ಓಡಿಸುತ್ತಾರೆ. ಬೇವಿನ ಎಣ್ಣೆಯನ್ನು ಕೊಬ್ಬರಿ ಎಣ್ಣೆಯೊಂದಿಗೆ ಬೆರೆಸಿ ದೇಹಕ್ಕೆ ಹಚ್ಚುವುದರಿಂದ ಸೊಳ್ಳೆಗಳು ಹತ್ತಿರ ಸುಳಿಯುವುದಿಲ್ಲ. ಮನೆಯಲ್ಲಿ ಬೇವಿನ ಎಣ್ಣೆಯಲ್ಲಿ ದೀಪವನ್ನೂ ಹಚ್ಚಬಹುದು.

ಓಮ: ಸೊಳ್ಳೆಗಳನ್ನು ಹಿಮ್ಮೆಟ್ಟಿಸಲು ಓಮ ಕೂಡ ಪರಿಣಾಮಕಾರಿಯಾಗಿದೆ. ಓಮದ ಕಾಳುಗಳನ್ನು ನುಣ್ಣಗೆ ಪುಡಿ ಮಾಡಿಕೊಂಡು ಅದಕ್ಕೆ ಸಾಸಿವೆ ಎಣ್ಣೆಯನ್ನು ಮಿಶ್ರಣ ಮಾಡಿ. ರಟ್ಟನ್ನು ತುಂಡುಗಳಾಗಿ ಕತ್ತರಿಸಿಕೊಳ್ಳಿ. ಎಣ್ಣೆಯ ಮಿಶ್ರಣಲ್ಲಿ ಹತ್ತಿಯನ್ನು ನೆನೆಸಿ ಅದನ್ನು ರಟ್ಟಿನ ಮೇಲೆ ಇಡಿ. ಈ ವಾಸನೆಗೆ ಸೊಳ್ಳೆಗಳು ಓಡಿ ಹೋಗುತ್ತವೆ.

ಬೆಳ್ಳುಳ್ಳಿ: ಬೆಳ್ಳುಳ್ಳಿ ರಸವನ್ನು ದೇಹಕ್ಕೆ ಹಚ್ಚಿದರೆ ಸೊಳ್ಳೆಗಳು ಕಚ್ಚುವುದಿಲ್ಲ. ಬೆಳ್ಳುಳ್ಳಿಯನ್ನು ಜಜ್ಜಿ ಅದರ ರಸವನ್ನು ಹಿಂಡಿಕೊಂಡು ಅದನ್ನು ನೀರಿನಲ್ಲಿ ಬೆರೆಸಿದ ನಂತರ ಮನೆಯ ಮೂಲೆ ಮೂಲೆಗಳಲ್ಲಿ ಚಿಮುಕಿಸಿಬಿಡಿ. ಹೀಗೆ ಮಾಡಿದರೆ  ಸೊಳ್ಳೆಗಳು ಓಡಿಹೋಗುತ್ತವೆ.

ಕರ್ಪೂರ: ಪೂಜೆಯಲ್ಲಿ ಬಳಸುವ ಎರಡು ರೂಪಾಯಿ ಕರ್ಪೂರದಿಂದ ಸೊಳ್ಳೆಗಳ ಕಾಟ ದೂರವಾಗುತ್ತದೆ. ಬೌಲ್‌ನಲ್ಲಿ ನೀರು ತೆಗೆದುಕೊಂಡು ಅದರಲ್ಲಿ ಕರ್ಪೂರವನ್ನು ಹಾಕಿ ಕೋಣೆಯ ಮೂಲೆಯಲ್ಲಿ ಇರಿಸಿ. ಅಥವಾ ಮನೆಯ ಮೂಲೆಗಳಲ್ಲಿ ಕರ್ಪೂರವನ್ನು ಸುಡಬಹುದು. ಕರ್ಪೂರದಿಂದ ಹೊರಸೂಸುವ ಪರಿಮಳದಿಂದ ಸೊಳ್ಳೆಗಳು ತಕ್ಷಣವೇ ಓಡಿಹೋಗುತ್ತವೆ. ಸೊಳ್ಳೆಗಳನ್ನು ತೊಡೆದುಹಾಕಲು ಇನ್ನೊಂದು ಅಗ್ಗದ, ಪರಿಣಾಮಕಾರಿ ಪರಿಹಾರವಿದೆ.

ಟರ್ಪಂಟೈನ್ ಎಣ್ಣೆಯನ್ನು ತೆಗೆದುಕೊಂಡು ಅದರಲ್ಲಿ ನುಣ್ಣಗೆ ಪುಡಿಮಾಡಿದ ಕರ್ಪೂರಗಳನ್ನು ಬೆರೆಸಬೇಕು. ಹಳೆಯ ರೀಫಿಲ್‌ನಿಂದ ರಾಡ್ ಅನ್ನು ತೆಗೆದುಕೊಂಡು, ಅದರಲ್ಲಿ ಪುಡಿಮಾಡಿದ ಕರ್ಪೂರವನ್ನು ಹಾಕಿ ಮತ್ತು ಟರ್ಪಂಟೈನ್ ಎಣ್ಣೆಯನ್ನು ಹಾಕಿ ಮತ್ತೆ ರಾಡ್‌ಗೆ ಜೋಡಿಸಿ. ಬಾಟಲಿಯ ಮುಚ್ಚಳವನ್ನು ಹಾಕುವಾಗ, ಎಣ್ಣೆಯಲ್ಲಿ ಕರ್ಪೂರ ಕರಗುವವರೆಗೆ ಇವೆರಡನ್ನು ಮಿಶ್ರಣ ಮಾಡಿ. ನಂತರ ಆ ರೀಫಿಲ್ ಅನ್ನು ಮತ್ತೆ ಬೋರ್ಡ್‌ನಲ್ಲಿ ಹಾಕಿ ಆನ್ ಮಾಡಿ. ಇದಲ್ಲದೇ 2 ರಿಂದ 3 ಕರ್ಪೂರವನ್ನು ನುಣ್ಣಗೆ ಅರೆದು ಬೇವಿನ ಎಣ್ಣೆಗೆ ಸೇರಿಸಿ ಚೆನ್ನಾಗಿ ಕಲಕಿ ಸಿಂಪಡಣೆ ಮಾಡಿದರೆ ಸೊಳ್ಳೆಗಳು ಹತ್ತಿರ ಬರುವುದಿಲ್ಲ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...