ಮುಯ್ಯಿಗೆ ಮುಯ್ಯಿ ಎಂಬ ಮಾತಿದೆ. ಆ ರೀತಿಯಂತಹ ಘಟನೆಯಿದು. ತನ್ನ ಕಿಡ್ನಿಗಳನ್ನು ತೆಗೆದ ವೈದ್ಯನ ಕಿಡ್ನಿಗಳನ್ನೇ ನನಗೆ ನೀಡಬೇಕೆಂದು ಬಿಹಾರದ ಮುಜಾಫರ್‌ಪುರ ಪಟ್ಟಣದ ಮಹಿಳೆಯೊಬ್ಬರು ಆಗ್ರಹಿಸಿದ್ದಾರೆ.
ಗರ್ಭಾಶಯದ ಸೋಂಕಿನಿಂದ ವೈದ್ಯರ ಬಳಿಗೆ ಹೋದಾಗ ಅವರು ತನ್ನ ಕಿಡ್ನಿಗಳನ್ನು ಕದ್ದು ಶಾಶ್ವತ ಡಯಾಲಿಸಿಸ್‌ಗೆ ಒಳಗಾಗುವಂತೆ ಮಾಡಿದ್ದಾರೆಂದು ಮಹಿಳೆ ಆರೋಪಿಸಿದ್ದಾರೆ.
ಆರೋಪಿ ವೈದ್ಯ ಆರ್.ಕೆ.ಸಿಂಗ್ ಪರಾರಿಯಾಗಿದ್ದು, ಸುನೀತಾ ದೇವಿ (38) ಈಗ ತನ್ನ ತವರೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಅಲ್ಲಿ ನಿಯಮಿತ ಡಯಾಲಿಸಿಸ್ ಅವರನ್ನು ಜೀವಂತವಾಗಿರಿಸಿದೆ.
ವೈದ್ಯರನ್ನು ಕೂಡಲೇ ಬಂಧಿಸುವಂತೆ ಸರ್ಕಾರಕ್ಕೆ ಮನವಿ ಮಾಡುತ್ತೇನೆ. ಅವರ ಕಿಡ್ನಿಯನ್ನು ನನಗೆ ನೀಡಬೇಕು ಎಂದು ಆಗ್ರಹಿಸಿ ಶಿಕ್ಷೆ ನೀಡುವುದಾಗಿ ಮಹಿಳೆ ಹೇಳಿದ್ದಾರೆ. ತನ್ನ ಗರ್ಭಾಶಯದ ಸೋಂಕಿಗೆ ಚಿಕಿತ್ಸೆ ನೀಡಲು ಶಸ್ತ್ರಚಿಕಿತ್ಸೆ ಮಾಡುವ ನೆಪದಲ್ಲಿ ಸೆಪ್ಟೆಂಬರ್ 3 ರಂದು ಖಾಸಗಿ ನರ್ಸಿಂಗ್ ಹೋಮ್‌ನಲ್ಲಿ ವೈದ್ಯ ಆರ್.ಕೆ. ಸಿಂಗ್ ತನ್ನ ಮೂತ್ರಪಿಂಡವನ್ನು ತೆಗೆದುಹಾಕಿದ್ದಾರೆ ಎಂದು ಸುನೀತಾ ಆರೋಪಿಸಿದ್ದಾರೆ.