alex Certify ನೀರು ಮಿಶ್ರಿತ ಪೆಟ್ರೋಲ್; ಅರ್ಧದಲ್ಲೇ ನಿಂತ ಕಾರು, ಮಾಲೀಕನಿಗೆ ಶಾಕ್ ! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೀರು ಮಿಶ್ರಿತ ಪೆಟ್ರೋಲ್; ಅರ್ಧದಲ್ಲೇ ನಿಂತ ಕಾರು, ಮಾಲೀಕನಿಗೆ ಶಾಕ್ !

ಪೆಟ್ರೋಲ್ ನಲ್ಲಿ ನೀರು ಬೆರೆಸಿ ಕಾರ್ ಗೆ ಹಾಕಿರುವುದಾಗಿ ತಮಿಳುನಾಡಿನ ಕೊಯಮತ್ತೂರಿನಲ್ಲಿ ವ್ಯಕ್ತಿಯೊಬ್ಬ ಕಂಡುಕೊಂಡಿದ್ದಾರೆ. ನವೆಂಬರ್ 15ರ ಮಂಗಳವಾರದಂದು ಕಾರು ನಡುರಸ್ತೆಯಲ್ಲಿ ನಿಂತ ಬಳಿಕ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ವಿಚಾರಣೆ ನಡೆಸುತ್ತಿದ್ದಾರೆ.

ಕೊಯಮತ್ತೂರಿನ ಅವರಂಪಾಲಯಂ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಸಿದ್ದಪುದೂರು ನಿವಾಸಿ ಪಾಂಡಿಯನ್ ಎಂಬುವವರ ಕಾರು ಇದಾಗಿದೆ. ಘಟನೆ ಸಂಭವಿಸಿದಾಗ ಪಾಂಡಿಯನ್ ಅವರ ಕಾರನ್ನು ಟ್ಯಾಕ್ಸಿಯಾಗಿ ಬಳಸಲಾಗುತ್ತಿದ್ದು ರಮೇಶ್ ಚಾಲನೆ ಮಾಡುತ್ತಿದ್ದರು.

ನವೆಂಬರ್ 15ರ ಮಂಗಳವಾರ ಬೆಳಗ್ಗೆ ಅವರಂಪಳಯಂ ಪ್ರದೇಶದ ಪೆಟ್ರೋಲ್ ಬಂಕ್‌ನಲ್ಲಿ ರಮೇಶ್ ಕಾರಿಗೆ ಇಂಧನ ಹಾಕಿದ್ದರು. 39.90 ಲೀಟರ್ ಪೆಟ್ರೋಲ್ ಗೆ 4,119 ರೂ. ಪಾವತಿಸಿ ರಮೇಶ್ ಹೋಗುತ್ತಿದ್ದಾಗ ಕಾರು ಅರ್ಧಕ್ಕೆ ನಿಂತಿತು. ಮೆಕ್ಯಾನಿಕ್ ಬಂದು ವಾಹನ ಪರಿಶೀಲಿಸಿದಾಗ ಪೆಟ್ರೋಲ್ ಟ್ಯಾಂಕ್ ಒಳಗೆ ನೀರು ತುಂಬಿಕೊಂಡಿತ್ತು.

ಕೂಡಲೇ ಚಾಲಕ ರಮೇಶ್ ಪೆಟ್ರೋಲ್ ಬಂಕ್‌ಗೆ ಧಾವಿಸಿ ಪೆಟ್ರೋಲ್ ಬದಲು ನೀರು ಇದೆ ಎಂದು ತಿಳಿಸಿದ್ದಾರೆ. ಆದರೆ ಆಡಳಿತ ಮಂಡಳಿ ಅವರಿಗೆ ಸೂಕ್ತ ಉತ್ತರ ನೀಡಲು ವಿಫಲವಾಗಿದೆ.

ಈ ಹಿನ್ನೆಲೆಯಲ್ಲಿ ರಮೇಶ್ ಕತ್ತೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೆಟ್ರೋಲ್ ಬಂಕ್ ಮ್ಯಾನೇಜರ್ ನಂದಗೋಪಾಲ್ ಘಟನೆಯ ಬಗ್ಗೆ ಇಂಡಿಯನ್ ಆಯಿಲ್ ಎಂಜಿನಿಯರ್‌ಗಳಿಗೆ ಮಾಹಿತಿ ನೀಡಿದ್ದಾರೆ. ನಂದಗೋಪಾಲ್‌, ಇಂಜಿನಿಯರ್‌ಗಳು ಬಂದು ಹಾನಿಗೊಳಗಾದ ಪೆಟ್ರೋಲ್‌ ಪಂಪ್‌ ಪರಿಶೀಲಿಸಲಿದ್ದಾರೆ ಎಂದು ತಿಳಿಸಿದರು.

ಇದೇ ವೇಳೆ ರಮೇಶ್ ತನ್ನ ಟ್ಯಾಂಕ್‌ನಲ್ಲಿ ತುಂಬಿದ್ದ ಪೆಟ್ರೋಲ್ ಅನ್ನು ಬಾಟಲಿಗೆ ಸಂಗ್ರಹಿಸಿ ತಾನು ಮೋಸ ಹೋಗಿರುವುದನ್ನು ತೋರಿಸಿದ್ದಾನೆ. ಈ ವಿಚಾರ ಜಿಲ್ಲೆಯಲ್ಲಿ ಸಂಚಲನ ಮೂಡಿಸಿತ್ತು.

ಪೆಟ್ರೋಲ್ ಮಾದರಿಗಳನ್ನು ಪರೀಕ್ಷೆಗೆ ತೆಗೆದುಕೊಂಡಿರುವುದಾಗಿ ಪೊಲೀಸ್ ಇಲಾಖೆ ಮೂಲಗಳು ಖಚಿತಪಡಿಸಿವೆ. ಕಾರಿನ ದುರಸ್ತಿಗೆ ಸಂಪೂರ್ಣ ವೆಚ್ಚವನ್ನು ಭರಿಸುವುದಾಗಿ ಪೆಟ್ರೋಲ್ ಬಂಕ್ ಮಾಲೀಕರು ನೊಂದವರಿಗೆ ಭರವಸೆ ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...