alex Certify ಶಾಕಿಂಗ್ ಸಂಗತಿ ಬಿಚ್ಚಿಟ್ಟ ದೀಪಿಕಾ ಪತಿ; ರಣವೀರ್ ಗೂ ಆಗಿತ್ತು ಕಾಸ್ಟಿಂಗ್ ಕೌಚ್ ಅನುಭವ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಾಕಿಂಗ್ ಸಂಗತಿ ಬಿಚ್ಚಿಟ್ಟ ದೀಪಿಕಾ ಪತಿ; ರಣವೀರ್ ಗೂ ಆಗಿತ್ತು ಕಾಸ್ಟಿಂಗ್ ಕೌಚ್ ಅನುಭವ…!

ಬಾಲಿವುಡ್ ಚಿತ್ರರಂಗದಲ್ಲಿ ಕಳೆದ ಕೆಲವು ವರ್ಷಗಳಿಂದ ಕಾಸ್ಟಿಂಗ್ ಕೌಚ್ ಕುರಿತ ಪ್ರಕರಣಗಳು ಬಹಿರಂಗವಾಗುತ್ತಲೇ ಇವೆ. ಇಂತಹ ಘಟನೆಗಳು ನಟಿಯರ ವಿಚಾರದಲ್ಲಿ ಹೆಚ್ಚಾಗಿ ನಡೆಯುತ್ತಿದ್ದು, ಕೆಲ ನಟರಿಗೂ ಸಹ ಇದರ ಅನುಭವವಾಗಿತ್ತು. ಇದೀಗ ದೀಪಿಕಾ ಪಡುಕೋಣೆ ಪತಿ, ರಣವೀರ್ ಸಿಂಗ್ ಈ ಕುರಿತ ಶಾಕಿಂಗ್ ಸಂಗತಿಯನ್ನು ಬಿಚ್ಚಿಟ್ಟಿದ್ದಾರೆ.

ಚಿತ್ರರಂಗಕ್ಕೆ ಬಂದ ಆರಂಭದ ದಿನಗಳಲ್ಲಿ ತಮಗೂ ಸಹ ಇಂತಹ ಅನುಭವವಾಗಿದೆ ಎಂದು ಹೇಳಿರುವ ಅವರು ನಿರ್ಮಾಪಕನೊಬ್ಬ ತಮ್ಮನ್ನು ಲೈಂಗಿಕವಾಗಿ ಬಳಸಿಕೊಳ್ಳಲು ಯತ್ನಿಸಿದ್ದ. ಆದರೆ ನಾನು ಸ್ವಂತ ಬಲದಿಂದ ಇಲ್ಲಿ ಗೆಲ್ಲುತ್ತೇನೆ ಎಂದು ಹೇಳಿ ಹೊರ ಬಂದಿದ್ದೆ ಎಂದು ರಣವೀರ್ ಸಿಂಗ್ ತಿಳಿಸಿದ್ದಾರೆ.

ರಣವೀರ್ ಸಿಂಗ್ ಸದ್ಯ ಮೊರಾಕ್ಕೊದಲ್ಲಿ ನಡೆಯುತ್ತಿರುವ ಇಂಟರ್ನ್ಯಾಷನಲ್ ಫಿಲಂ ಫೆಸ್ಟಿವಲ್ ನಲ್ಲಿ ಭಾಗವಹಿಸಿದ್ದು, ಅವರಿಗೆ ಪ್ರತಿಷ್ಠಿತ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಈ ಸಂದರ್ಭದಲ್ಲಿ ಮಾತನಾಡಿರುವ ಅವರು ತಮಗಾದ ಕಾಸ್ಟಿಂಗ್ ಕೌಚ್ ಅನುಭವವನ್ನು ಬಿಚ್ಚಿಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...