ಕೇರಳದ ತ್ರಿಶೂರಿನಲ್ಲಿ ಅಪರೂಪದ ಮದುವೆಯೊಂದು ನೆರವೇರಿದೆ. ಶಾಲಾ ದಿನಗಳಲ್ಲಿ ಸಹಪಾಠಿಗಳಾಗಿದ್ದ ಇಬ್ಬರು ಬರೋಬ್ಬರಿ 35 ವರ್ಷಗಳ ಬಳಿಕ ವೈವಾಹಿಕ ಬದುಕಿಗೆ ಕಾಲಿಟ್ಟಿದ್ದಾರೆ. ಇದಕ್ಕೆ ಅವರ ಶಾಲಾ ದಿನಗಳ ಇತರೆ ಸಹಪಾಠಿಗಳು ಸಾಕ್ಷಿಯಾಗಿದ್ದಾರೆ.
ಹರಿದಾಸನ್ ಮತ್ತು ಸುಮತಿ ವೈವಾಹಿಕ ಬದುಕಿಗೆ ಕಾಲಿಟ್ಟ ಜೋಡಿಯಾಗಿದ್ದು, ಇವರುಗಳು 1986 – 87 ನೇ ಸಾಲಿನ ಹೈಸ್ಕೂಲ್ ವಿದ್ಯಾರ್ಥಿಗಳಾಗಿದ್ದರು. ಶಾಲಾ ದಿನಗಳಿಂದಲೇ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದ ಇವರಿಬ್ಬರು ಅವಿವಾಹಿತರಾಗಿಯೇ ಉಳಿದುಕೊಂಡಿದ್ದರು.
ಹೈಸ್ಕೂಲ್ನಲ್ಲಿ ಸಹಪಾಠಿಗಳಾಗಿದ್ದವರು ವಾಟ್ಸಾಪ್ ಗ್ರೂಪ್ ಒಂದನ್ನು ರಚಿಸಿಕೊಂಡಿದ್ದು, ಮೂರು ವರ್ಷಗಳ ಹಿಂದೆ ಸ್ನೇಹಿತರೆಲ್ಲರೂ ಸಹ ಪುನರ್ಮಿಲನವಾಗಿದ್ದರು. ಈ ವೇಳೆ ಹರಿದಾಸ್ ಮತ್ತು ಸುಮತಿ ಅವಿವಾಹಿತರಾಗಿಯೇ ಉಳಿದಿರುವುದು ಇತರೆ ಸ್ನೇಹಿತರ ಗಮನಕ್ಕೆ ಬಂದಿದೆ.
ಆಗ ಇತರೆ ಸ್ನೇಹಿತರು ಸೇರಿ ಇವರನ್ನು ಒಂದುಗೂಡಿಸಬೇಕೆಂಬ ತೀರ್ಮಾನಕ್ಕೆ ಬಂದಿದ್ದಾರೆ. ಆಗಿನಿಂದಲೂ ಇವರಿಬ್ಬರ ಮನವೊಲಿಸುವ ಪ್ರಯತ್ನ ಮಾಡಿದ್ದು ಇದೀಗ ಅದಕ್ಕೆ ಯಶಸ್ಸು ಸಿಕ್ಕಿದೆ. ನವೆಂಬರ್ 14ರಂದು ಹರಿದಾಸನ್ ಮತ್ತು ಸುಮತಿ ತಮ್ಮ ಹೈಸ್ಕೂಲು ಸಹಪಾಠಿಗಳ ಸಮ್ಮುಖದಲ್ಲಿ ವಿವಾಹ ಬಂಧನಕ್ಕೆ ಒಳಗಾಗಿದ್ದಾರೆ.