ವಾರ್ಸಾ: ಉಕ್ರೇನ್ ಬಳಿಕ ಪೋಲೆಂಡ್ ಮೇಲೆ ರಷ್ಯಾ ಸೇನೆ ದಾಳಿ ನಡೆಸಿದೆ. ಪೋಲೆಂಡ್ ಗಡಿಯಲ್ಲಿ ರಷ್ಯಾ ಸೇನೆಯಿಂದ ರಾಕೆಟ್ ದಾಳಿ ನಡೆಸಲಾಗಿದೆ ಎಂದು ರಷ್ಯಾ ವಿರುದ್ಧ ಪೋಲೆಂಡ್ ವಿದೇಶಾಂಗ ಸಚಿವಾಲಯ ಆರೋಪ ಮಾಡಿದೆ.
ರಷ್ಯಾ ದಾಳಿಯಿಂದ ಪೋಲೆಂಡ್ ನ ಇಬ್ಬರು ನಾಗರೀಕರು ಮೃತಪಟ್ಟಿದ್ದಾರೆ. ಪೋಲೆಂಡ್ ಗಡಿ ಪ್ರವೇಶಿಸಿ ರಷ್ಯಾ ಸೇನೆ ದಾಳಿ ನಡೆಸಿದೆ ಎಂದು ರಷ್ಯಾ ವಿರುದ್ಧ ಪೋಲೆಂಡ್ ವಿದೇಶಾಂಗ ಸಚಿವಾಲಯ ಆರೋಪಿಸಿದೆ.
ಈ ದಾಳಿಯನ್ನು ನ್ಯಾಟೋ ಪ್ರಧಾನ ಕಾರ್ಯದರ್ಶಿ ಜೆನ್ಸ್ ಖಂಡಿಸಿದ್ದಾರೆ. ಪೋಲೆಂಡ್ ಅಧ್ಯಕ್ಷರ ಜೊತೆಗೆ ಮಾತುಕತೆ ನಡೆಸಿದ ಅವರು ಘಟನೆಯ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.
ರಷ್ಯಾದ ಕ್ಷಿಪಣಿಗಳು ಉಕ್ರೇನ್ ಗಡಿಯ ಬಳಿಯ ತನ್ನ ಭೂಪ್ರದೇಶದಲ್ಲಿ ಬಂದಿಳಿದ ನಂತರ ಪೋಲೆಂಡ್ ಇಂದು ತನ್ನ ರಾಷ್ಟ್ರೀಯ ಭದ್ರತಾ ಮಂಡಳಿ ಮತ್ತು ಕ್ಯಾಬಿನೆಟ್‌ನ ತುರ್ತು ಸಭೆಗಳನ್ನು ಕರೆದಿದೆ. ಗಡಿಯ ಸಮೀಪವಿರುವ ಪ್ರಜೆವೊಡೋವ್ ಗ್ರಾಮದ ಕೃಷಿ ಕಟ್ಟಡದಲ್ಲಿ ಸ್ಫೋಟದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ವರದಿ ಮಾಡಿದೆ.
ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಅವರು ಪೋಲೆಂಡ್ ಸ್ಫೋಟಗಳ ಕುರಿತು ಜಾಗತಿಕ ನಾಯಕರೊಂದಿಗೆ ತುರ್ತು ಸಭೆ ನಡೆಸಿದರು. ಇಂಡೋನೇಷ್ಯಾದ ಬಾಲಿಯಲ್ಲಿ ಜಿ20 ಜಾಗತಿಕ ನಾಯಕರು ಸೇರಿದ್ದಾಗಲೇ ಈ ಘಟನೆ ನಡೆದಿದ್ದು, ಇಂದು ನಾಯಕರು ತುರ್ತು ಸಭೆ ನಡೆಸಲಿದ್ದಾರೆ.
ಪೋಲಿಷ್ ಸರ್ಕಾರವು ರಷ್ಯಾದ ರಾಯಭಾರಿಯನ್ನು ದೇಶಕ್ಕೆ ಕರೆಸಿದೆ, ರಷ್ಯಾ ನಿರ್ಮಿತ ಕ್ಷಿಪಣಿಯು ದೇಶದಲ್ಲಿ ಬಿದ್ದು ಇಬ್ಬರು ನಾಗರಿಕರನ್ನು ಕೊಂದಿದೆ ಎಂದು ಹೇಳಿಕೊಂಡಿದೆ. ರಷ್ಯಾ ಇದನ್ನು ನಿರಾಕರಿಸಿದೆ.