‘ಜೀನಾ ಇಸಿಕಾ ನಾಮ್ ಹೇ‘, ಬಾಲಿವುಡ್ ಎವರ್ಗ್ರೀನ್ ಹಾಡುಗಳಲ್ಲಿ ಒಂದು. 1959ರಲ್ಲಿ ತೆರೆಕಂಡ ಈ ಸಿನೆಮಾದಲ್ಲಿ ರಾಜ್‌ಕಪೂರ್ ನಟನೆ ಅದ್ಭುತವಾಗಿತ್ತು. ಮುಕೇಶ್ ಅವರ ಕಂಠಸಿರಿಯಿಂದ ಬಂದ ಈ ಹಾಡನ್ನ ಇಂದಿಗೂ ಜನರು ಗುನುಗುತ್ತಾರೆ. ಇತ್ತೀಚೆಗೆ ಇದೇ ಹಾಡನ್ನು ಕಿಲಿಪೌಲ್ ಹಾಡಿದ್ದಾರೆ.
ಸೋಶಿಯಲ್ ಮಿಡಿಯಾದಲ್ಲಿ ಆಗಾಗ ಸದ್ದು ಮಾಡುತ್ತಲೇ ಇರುವ ಕಿಲಿಪೌಲ್, ಇಂಟರ್ನೆಟ್ ಲೋಕದಲ್ಲಿ ಸೆನ್ಸೇಶನ್ ಹುಟ್ಟು ಹಾಕಿರುವ ಯೂಟೂಬರ್ಸ್ಗಳಲ್ಲಿ ಒಬ್ಬರು. ಇವರು ಆಗಾಗ ಬಾಲಿವುಡ್ ಹಾಡಿಗೆ ಹೆಜ್ಜೆ ಹಾಕುವುದು, ಡೈಲಾಗ್‌ಗಳಿಗೆ ಲಿಪ್ ಸಿಂಕ್ ಮಾಡಿ ಆ ವಿಡಿಯೋಗಳನ್ನ ಪೋಸ್ಟ್ ಮಾಡ್ತಾನೇ ಇರ್ತಾರೆ. ಭಾಷೆ ಗೊತ್ತಿಲ್ಲದಿದ್ದರೂ, ಅರ್ಥ ಬಾರದಿದ್ದರೂ ಅವರು ಮಾಡುತ್ತಿರುವ ಪ್ರಯತ್ನ ನೋಡಿ ನೆಟ್ಟಿಗರು ಫುಲ್ ಖುಷ್ ಆಗ್ಹೋಗಿದ್ದಾರೆ.
ಇತ್ತೀಚೆಗೆ ಇದೇ ಕಿಲಿಪೌಲ್ ಖುದ್ದು ತಾವೇ, ರಾಜ್‌ಕಪೂರ್ ಅವರ ನಟನೆಯ “ಜೀನಾ ಇಸಿಕಾ ನಾಮ ಹೇ” ಅನ್ನೊ ಹಾಡನ್ನ ಹಾಡಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್ ಅಕೌಂಟ್ನ್‌ನಲ್ಲಿ ಪೋಸ್ಟ್ ಮಾಡಿಕೊಂಡಿರುವ ಈ ವಿಡಿಯೋ ಶೀರ್ಷಿಕೆಯಲ್ಲಿ “ಹಳೆಯ ಸಮಯದತ್ತ ನೋಡಿ ಜೀವನಕ್ಕೂಒಂದು ಅರ್ಥ ಇದೆ“ ಅಂತ ಬರೆದುಕೊಂಡಿರೋ ಕಿಲಿಪೌಲ್ ಹಿಂದಿ ಭಾಷೆ ಮತ್ತು ಭಾರತದ ಬಗ್ಗೆ ಇರುವ ಪ್ರೀತಿ ಗೌರವ ನೋಡಿ ನೆಟ್ಟಿಗರು ಫಿದಾ ಆಗಿದ್ಧಾರೆ..
ಕಾಮೆಂಟ್ ಬಾಕ್ಸ್ ನಲ್ಲಂತೂ ಕಿಲಿಪೌಲ್ ಅವರನ್ನ ಹೊಗಳದವರೇ ಯಾರೂ ಇಲ್ಲ. ಒಬ್ಬರು ಅದ್ಭುತ ದನಿ ಎಂದು ಕಾಮೆಂಟ್ ಬಾಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ. ಇನ್ನೊಬ್ಬರು ಓಲ್ಡ್ ಈಸ್ ಗೋಲ್ಡ್ ಅಂತ ಬರೆದಿದ್ದಾರೆ. ಏನೇ ಅನ್ನಿ ಕಿಲಿಪೌಲ್ ಅವರ ಈ ರೀತಿಯ ಪ್ರಯತ್ನ ಮೆಚ್ಚತಕ್ಕದ್ದು.