ಅಹಮದಾಬಾದ್- ಗುಜರಾತ್ ನಲ್ಲಿ ಚುನಾವಣಾ ಪ್ರಚಾರ ಜೋರಾಗಿ ನಡೀತಾ ಇದೆ. ಚುನಾವಣೆ ಗೆಲ್ಲೋದಕ್ಕೆ ಈಗಾಗಲೇ ಎಲ್ಲಾ ಪಕ್ಷಗಳು ಕಸರತ್ತು ಮಾಡ್ತಾ ಇವೆ. ಬಿಜೆಪಿಯಂತೂ ಶತಾಯ ಗತಯಾ ಅಧಿಕಾರ ಹಿಡಿಯಲೇಬೇಕು ಎಂದು ರಣತಂತ್ರ ಮಾಡ್ತಾ ಇದೆ. ಈ ಬೆನ್ನಲ್ಲೇ ಚುನಾವಣಾ ಆಯೋಗಕ್ಕೆ ಎಎಪಿ ಮನವಿಯೊಂದನ್ನ ಮಾಡಿದೆ.
ಹೌದು, ಗುಜರಾತ್ ನ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಇರುವ ಮೋದಿ ಫೋಟೋವನ್ನು ತೆಗೆದು ಹಾಕುವಂತೆ ಚುನಾವಣಾ ಆಯೋಗಕ್ಕೆ ಮನವಿ ಮಾಡಿದೆ. ಯಾಕಂದರೆ ಅವರ ಫೋಟೋ ಇದ್ದರೆ ಅದು ಚುನಾವಣಾ ನೀತಿ ಉಲ್ಲಂಘನೆ ಮಾಡಿದ ರೀತಿ ಆಗಲಿದೆ. ಹಾಗಾಗಿ ಭಾವಚಿತ್ರ ತೆಗೆದು ಹಾಕುವಂತೆ ಮನವಿ ಮಾಡಿದ್ದಾರೆ ಆಮ್ ಆದ್ಮಿ ಪಕ್ಷದ ಕಾನೂನು ಘಟಕದ ಕಾರ್ಯದರ್ಶಿ ಪುನೀತ್ ಜುನೇಜಾ ಮನವಿ ಮಾಡಿದ್ದಾರೆ.
ಇನ್ನು ಗುಜರಾತ್ ನ ಚುನಾವಣೆ ಡಿಸೆಂಬರ್ 1 ಹಾಗೂ 5 ರಂದು ಎರಡು ಹಂತದಲ್ಲಿ ನಡೆಯಲಿದೆ. 182 ಕ್ಷೇತ್ರಕ್ಕೆ ಚುನಾವಣೆ ನಡೆಯಲಿದೆ. ಇನ್ನು ಡಿಸೆಂಬರ್ 8 ರಂದು ಮತ ಎಣಿಕೆ ನಡೆಯಲಿದ್ದು, ಅಂದೇ ಗುಜರಾತ್ ಭವಿಷ್ಯ ಹೊರ ಬರಲಿದೆ. ಅಧಿಕಾರ ಚುಕ್ಕಾಣಿ ಹಿಡಿಯಲು ಆಡಳಿತ ಪಕ್ಷ ತಂತ್ರ ಹೂಡಿದರೆ, ಕಾಂಗ್ರೆಸ್ ಹಾಗೂ ಎಎಪಿ ಕೂಡ ಅಧಿಕಾರ ಹಿಡಿಯಲು ರಣತಂತ್ರ ರೂಪಿಸಿವೆ.