ವಿವಾಹಗಳಲ್ಲಿ ಹಲವಾರು ರೀತಿಯ ಹಾಸ್ಯಭರಿತ ಸನ್ನಿವೇಶಗಳು ನಡೆಯುತ್ತವೆ. ಕೆಲವೊಮ್ಮೆ ಉದ್ದೇಶಪೂರ್ವಕವಾಗಿ ಈ ಹಾಸ್ಯಗಳನ್ನು ಸೃಷ್ಟಿ ಮಾಡಿದರೆ, ಇನ್ನು ಕೆಲವೊಮ್ಮೆ ಅಚಾನಕ್ ಆಗಿ ಪೇಚಿಗೆ ಸಿಲುಕುವ ಮೂಲಕ ನೋಡುಗರನ್ನು ಹಾಸ್ಯಕ್ಕೆ ತಳ್ಳುತ್ತದೆ. ಆದರೆ ಇಲ್ಲೊಂದು ವೈರಲ್ ವಿಡಿಯೋದಲ್ಲಿ ವಧುವೇ ಉದ್ದೇಶಪೂರ್ವಕವಾಗಿ ಹಾಸ್ಯ ಚಟಾಕಿಯ ಸನ್ನಿವೇಶ ಸೃಷ್ಟಿ ಮಾಡಿದ್ದು, ಅದೀಗ ವೈರಲ್ ಆಗಿದೆ.
15 ವರ್ಷಗಳ ಡೇಟಿಂಗ್ ನಂತರ ಬೈರಾನ್ ಮತ್ತು ಕ್ರಿಸ್ಟಿ ಜೆಫರೀಸ್ ಜೋಡಿ ಕೊನೆಗೂ ಮದುವೆಗೆ ಸಿದ್ಧರಾದರು. ಇವರ ಮದುವೆಗೆ ಅನೇಕ ಅಡೆತಡೆಗಳು ಬಂದಿದ್ದರಿಂದ ಮದುವೆ ಸಾಧ್ಯವಾಗಿರಲಿಲ್ಲ. ಕೊನೆಗೆ ಎಲ್ಲ ಅಡೆತಡೆಗಳನ್ನು ಗೆದ್ದು 15 ವರ್ಷ ಒಟ್ಟಿಗೇ ನೆಲೆಸಿದ ನಂತರ ಮದುವೆ ಸಮಾರಂಭ ಭರ್ಜರಿಯಾಗಿ ನಡೆದಿತ್ತು.
ಈ ಸಂದರ್ಭದಲ್ಲಿ ವಧು ಹಾಸ್ಯ ಚಟಾಕಿ ಸಿಡಿಸಿದ್ದಾಳೆ. ಅದೇನೆಂದರೆ ಪತ್ರವೊಂದನ್ನು ತೆಗೆದುಕೊಂಡ ಆಕೆ ಅದರಲ್ಲಿರುವ ಧೂಳನ್ನು ಜಾಡಿಸಿದ್ದಾಳೆ. ಆ ಪತ್ರದ ಮೇಲೆ ವಿಪರೀತ ಧೂಳು ಇತ್ತು. ಅದು ಹಾರಿಹೋಗಿ, ಆ ಪರಿಯ ಧೂಳು ನೋಡಿ ವರ ಸೇರಿದಂತೆ ಅಲ್ಲಿದ್ದವರು ದಂಗಾಗಿದ್ದಾರೆ. 15 ವರ್ಷಗಳ ಹಿಂದೆ ಬರೆದ ಪತ್ರವಿದು. ಇಷ್ಟು ವರ್ಷಗಳ ಬಳಿಕ ಮದುವೆಯಾದರೆ ಹೀಗೆಯೇ ಆಗುವುದು ಎಂದು ವಧು ಚಟಾಕಿ ಹಾರಿಸಿದ್ದಾಳೆ.
ಅಸಲಿಗೆ ಅಲ್ಲಿ ಇದ್ದುದು ನಿಜವಾದ ಧೂಳಲ್ಲ. ಬದಲಿಗೆ ಯುವತಿಯೇ ಬೇಕಂತಲೇ ನಕಲಿ ಧೂಳನ್ನು ಹಾಕಿ ಇಟ್ಟಿದ್ದಳು. ನಮ್ಮಿಬ್ಬರ ಸಂಬಂಧ 15 ವರ್ಷಗಳ ಧೂಳಿನಿಂದ ಕೂಡಿದ್ದು, ಈಗ ಎಲ್ಲವೂ ಹೋಗಿ ಸಲೀಸಾಗಿ ಮದುವೆಯಾಗುತ್ತಿದ್ದೇವೆ ಎಂದು ಯುವತಿ ಹೇಳಿದಾಗ ಅಲ್ಲಿದ್ದವರೆಲ್ಲಾ ನಕ್ಕಿದ್ದು, ಇದರ ವಿಡಿಯೋ ವೈರಲ್ ಆಗಿದೆ.