ಹೈದರಾಬಾದ್: ನಟ ಬಾಬು ಅವರ ತಂದೆ ಸೂಪರ್ ಸ್ಟಾರ್ ಕೃಷ್ಣ ನಿಧನರಾಗಿದ್ದಾರೆ. ಹೈದರಾಬಾದ್ ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲಾಗಿದ್ದ ಕೃಷ್ಣ ಮುಂಜಾನೆ 4 ಗಂಟೆಗೆ ನಿಧನರಾಗಿದ್ದಾರೆ. 350 ಕ್ಕೂ ಹೆಚ್ಚು ಚಿತ್ರಗಳಲ್ಲಿ ಅವರು ಅಭಿನಯಿಸಿದ್ದರು.
79 ವರ್ಷದ ಕೃಷ್ಣ ಅವರು ತಮ್ಮ ಮೂರು ದಶಕಗಳ ಸುದೀರ್ಘ ವೃತ್ತಿಜೀವನದಲ್ಲಿ 350 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಾರೆ, ಅವರು ತೆಲುಗು ಚಿತ್ರರಂಗದ ಮೊದಲ ಸೂಪರ್‌ಸ್ಟಾರ್ ಎಂದು ಪರಿಗಣಿಸಲ್ಪಟ್ಟಿದ್ದಾರೆ. ಕೃಷ್ಣ ಕೊನೆಯ ಬಾರಿಗೆ 2016 ರ ತೆಲುಗು ಚಲನಚಿತ್ರ ಶ್ರೀ ಶ್ರೀ ನಲ್ಲಿ ಕಾಣಿಸಿಕೊಂಡರು. ಕಳೆದ ತಿಂಗಳು, ಕೃಷ್ಣ ಅವರ ಮೊದಲ ಪತ್ನಿ ಮತ್ತು ಮಹೇಶ್ ಬಾಬು ಅವರ ತಾಯಿ ಇಂದಿರಾ ದೇವಿ ನಿಧನರಾದರು. ಅವರು ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು.
‘ಅಗ್ನಿ ಪರ್ವತಂ’, ‘ನಂಬರ್ ಒನ್’, ‘ಬ್ರಹ್ಮಾಸ್ತ್ರಂ’. ‘ವಾರಸಡು’, ‘ಪ್ರಜಾರಾಜ್ಯಂ’, ‘ಈ ನಾಡು’, ‘ಸಾಕ್ಷಿ’, ‘ಸಿಂಹಾಸನಂ’ ಮೊದಲಾದ ಚಿತ್ರಗಳಲ್ಲಿ ಕೃಷ್ಣ ಅಅಭಿನಯಿಸಿದ್ದಾರೆ.