ಬೆಂಗಳೂರು: ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ ಐ ಎ ತನಿಖೆಯಲ್ಲಿ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಪಿಎಫ್ ಐ ಸಂಘಟನೆಯ ಸಂಚು ಬಯಲಾಗಿದೆ.
ಮಸೂದ್ ಹತ್ಯೆಗೆ ಪ್ರತೀಕಾರವಾಗಿ ಪ್ರವೀಣ್ ನೆಟ್ಟಾರು ಹತ್ಯೆ ಮಾಡಿ ಭಯ ಹುಟ್ಟಿಸುವ ಉದ್ದೇಶವಿತ್ತು. ಬಂಧಿತ ಶಹೀದ್ ಬೆಳ್ಳಾರೆ ಮನೆಯಲ್ಲಿಯೇ ಹತ್ಯೆಗೆ ಸ್ಕೆಚ್ ರೂಪಿಸಲಾಗಿತ್ತು ಎಂದು ತಿಳಿದುಬಂದಿದೆ.
ಎಸ್ ಡಿ ಪಿಐ ಮುಖಂಡ ಶಾಫಿ, ಇಕ್ಬಾಲ್ ಬೆಳ್ಳಾರೆ ತಂಗಿಯ ಪತಿ ಶಹೀನ್ ನಿವಾಸದಲ್ಲಿಯೇ ಪ್ರವೀಣ್ ನೆಟ್ಟಾರು ಹತ್ಯೆಗೆ ಸಂಚು ರೂಪಿಸಿದ್ದರು ಎಂದು ಎನ್ ಐಎ ತನಿಖೆಯಲ್ಲಿ ತಿಳಿದುಬಂದಿದೆ.