ಪುಣೆಯ ಶ್ರೀ ಶಿವ್ ಛತ್ರಪತಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ನಡೆಯುತ್ತಿರುವ ವಿವೋ ಪ್ರೊ ಕಬಡ್ಡಿ ಸೀಸನ್ 9ರಲ್ಲಿ ಬೆಂಗಳೂರು ಬುಲ್ಸ್ ಭರ್ಜರಿ ಪ್ರದರ್ಶನ ತೋರುತ್ತಲೇ ಇದೆ ನಿನ್ನೆ ನಡೆದ ಬೆಂಗಳೂರು ಬುಲ್ಸ್ ಹಾಗೂ ತಮಿಳ್ ತಲೈವಾಸ್ ನಡುವಿನ ಕಬಡ್ಡಿ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ 6 ಅಂಕಗಳಿಂದ ರೋಚಕ ಜಯ ಸಾಧಿಸಿದ್ದು, ಈ ಮೂಲಕ ವಿವೋ ಪ್ರೊ ಕಬಡ್ಡಿ ಅಂಕಪಟ್ಟಿಯಲ್ಲಿ ಮೊದಲನೇ ಸ್ಥಾನಕ್ಕೆ ಜಿಗಿದಿದೆ.
ಭರತ್ ಹೂಡಾ ಹಾಗೂ ಡಿಫೆಂಡರ್ ಸೌರಭ್ ನಂದಲ್ ಅವರ ಭರ್ಜರಿ ಪ್ರದರ್ಶನದಿಂದ ಬೆಂಗಳೂರು ಬುಲ್ಸ್ ತಂಡ ಟಾಪ್ ಟೀಮ್ ಆಗಿ ಮುನ್ನುಗ್ಗುತ್ತಿದೆ.ಇಂದು ನಡೆಯಲಿರುವ ಪುಣೇರಿ ಪಲ್ಟಾನ್ ಹಾಗೂ ಬೆಂಗಾಲ್ ವಾರಿಯರ್ಸ್ ಪಂದ್ಯದಲ್ಲಿ ಪುಣೇರಿ ಪಲ್ಟನ್ ಗೆ ಜಯ ಸಿಕ್ಕರೆ ಮತ್ತೊಮ್ಮೆ ಪುಣೇರಿ ಪಲ್ಟಾನ್ ಮೊದಲ ಸ್ಥಾನಕ್ಕೇರಲಿದ್ದಾರೆ.