alex Certify ಬಸ್ ಚಾಲನೆ ವೇಳೆ ಡ್ರೈವರ್ ಗೆ ಪಿಟ್ಸ್; ಆಟೋರಿಕ್ಷಾಗೆ ಗುದ್ದಿ ಚಾಲಕ ಸಾವು, ಪ್ರಯಾಣಿಕನಿಗೆ ಗಾಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಸ್ ಚಾಲನೆ ವೇಳೆ ಡ್ರೈವರ್ ಗೆ ಪಿಟ್ಸ್; ಆಟೋರಿಕ್ಷಾಗೆ ಗುದ್ದಿ ಚಾಲಕ ಸಾವು, ಪ್ರಯಾಣಿಕನಿಗೆ ಗಾಯ

Delhi Bus Driver Suffers Epileptic Fit, Rams Autorickshaw, 1 Deadಉತ್ತರ ದಿಲ್ಲಿಯ ತೀಸ್‌ ಹಜಾರಿ ಕೋರ್ಟ್‌ ಎದುರು ರಾಂಗ್ ರೂಟಲ್ಲಿ ಬಂದ ಬಸ್‌ ಆಟೋರಿಕ್ಷಾಕ್ಕೆ ಡಿಕ್ಕಿ ಹೊಡೆದ ಪರಿಣಾಮ ಆಟೋರಿಕ್ಷಾ ಚಾಲಕ ಸಾವನ್ನಪ್ಪಿದ್ದು, ಓರ್ವ ಪ್ರಯಾಣಿಕ ಗಾಯಗೊಂಡಿದ್ದಾರೆ. ಪ್ರಕರಣದಲ್ಲಿ ಬಸ್ ಚಾಲಕನನ್ನು ಬಂಧಿಸಲಾಗಿದೆ.

ದೆಹಲಿ ಸಾರಿಗೆ ಸಂಸ್ಥೆ ಅಥವಾ ಡಿಟಿಸಿ ಬಸ್‌ನ ಚಾಲಕ ಪಿಟ್ಸ್ ( ಎಪಿಲಿಪ್ಸಿ) ನಿಂದ ಬಳಲುತ್ತಿದ್ದರು. ಈ ವೇಳೆ ವಾಹನ ನಿಯಂತ್ರಿಸಲು ಸಾಧ್ಯವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಚಾಲಕನಿಗೆ ಪಿಟ್ಸ್ ಬಂದ ವೇಳೆ ಬಸ್ ರಸ್ತೆಯ ತಪ್ಪಾದ ಬದಿಗೆ ಪ್ರವೇಶಿಸಿ ಎದುರಿನಿಂದ ಬರುತ್ತಿದ್ದ ಆಟೋರಿಕ್ಷಾಕ್ಕೆ ಡಿಕ್ಕಿ ಹೊಡೆದಿದೆ. ಆಟೋರಿಕ್ಷಾ ಚಾಲಕ 49 ವರ್ಷದ ವ್ಯಕ್ತಿ ಗಂಭೀರ ಗಾಯಗೊಂಡಿದ್ದರು. ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಚಿಕಿತ್ಸೆ ವೇಳೆ ಅವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಆಟೋರಿಕ್ಷಾ ಪ್ರಯಾಣಿಕರ ದೂರಿನ ಆಧಾರದ ಮೇಲೆ ಬಸ್ ಚಾಲಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...