ಗುಜರಾತ್ ಚುನಾವಣೆಗೆ ಕೆಲವೇ ವಾರಗಳು ಉಳಿದಿದ್ದು ಆಮ್ ಆದ್ಮಿ ಪಕ್ಷವು ತನ್ನ ಮುಖ್ಯಮಂತ್ರಿ ಅಭ್ಯರ್ಥಿ ಇಸುದನ್ ಗಧ್ವಿ ಅವರು ಶ್ರೀಕೃಷ್ಣನ ಪವಿತ್ರ ಭೂಮಿ ಯಿಂದ ಸ್ಪರ್ಧಿಸಲಿದ್ದಾರೆ ಎಂದು ಎಎಪಿ ಭಾನುವಾರ ಪ್ರಕಟಿಸಿದೆ. ದೇವಭೂಮಿ ದ್ವಾರಕಾ ಜಿಲ್ಲೆಯ ಖಂಭಾಲಿಯಾದಿಂದ ಇಸುದನ್ ಗಧ್ವಿ ಸ್ಪರ್ಧಿಸಲಿದ್ದಾರೆ.
“ರೈತರು, ನಿರುದ್ಯೋಗಿ ಯುವಕರು, ಮಹಿಳೆಯರು ಮತ್ತು ಉದ್ಯಮಿಗಳಿಗಾಗಿ ಹಲವು ವರ್ಷಗಳಿಂದ ಧ್ವನಿ ಎತ್ತುತ್ತಿರುವ ಇಸುದನ್ ಗಧ್ವಿ ಖಂಭಾಲಿಯಾದಿಂದ ಚುನಾವಣೆಗೆ ಸ್ಪರ್ಧಿಸಲಿದ್ದಾರೆ. ಶ್ರೀಕೃಷ್ಣನ ಪುಣ್ಯಭೂಮಿಯಿಂದ ಗುಜರಾತ್‌ಗೆ ಹೊಸ ಮತ್ತು ದಕ್ಷ ಮುಖ್ಯಮಂತ್ರಿ ಸಿಗುತ್ತಾರೆ” ಎಂದು ಅರವಿಂದ್ ಕೇಜ್ರಿವಾಲ್ ಟ್ವೀಟ್ ನಲ್ಲಿ ಹೇಳಿದ್ದಾರೆ.
ಕೇಜ್ರಿವಾಲ್ ಪೋಸ್ಟ್‌ಗೆ ಪ್ರತಿಕ್ರಿಯೆಯಾಗಿ ಇಸುದನ್ ಗಧ್ವಿ ಅರವಿಂದ್ ಕೇಜ್ರಿವಾಲ್‌ಗೆ ಕೃತಜ್ಞತೆ ಸಲ್ಲಿಸಿದರು. “ನೀವು ಮತ್ತು ಗುಜರಾತ್‌ನ ಜನರು ನನ್ನ ಮೇಲೆ ಇಟ್ಟಿರುವ ನಂಬಿಕೆ….. ನನ್ನ ಕೊನೆಯ ಉಸಿರು ಇರುವವರೆಗೂ ನಾನು ಗುಜರಾತ್‌ನ ಜನರಿಗೆ ಸೇವೆ ಸಲ್ಲಿಸುತ್ತೇನೆ ಎಂದು ನಾನು ಭರವಸೆ ನೀಡುತ್ತೇನೆ” ಎಂದು ಅವರು ಟ್ವೀಟ್‌ನಲ್ಲಿ ಬರೆದಿದ್ದಾರೆ.
ಗುಜರಾತಿನ ಮಾಜಿ ಟಿವಿ ಪತ್ರಕರ್ತ ಮತ್ತು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಗಧ್ವಿ ಅವರನ್ನು ಈ ತಿಂಗಳ ಆರಂಭದಲ್ಲಿ ಗುಜರಾತ್‌ಗೆ ಸಿಎಂ ಅಭ್ಯರ್ಥಿ ಎಂದು ಎಎಪಿ ಘೋಷಿಸಲಾಯಿತು.