ಬಾಗಲಕೋಟೆ: ಗೋವಿನಜೋಳ ಮಷಿನ್ ನಲ್ಲಿ ಸಿಲುಕಿ ಮಹಿಳೆ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಬಾಗಲಕೋಟೆ ಜಿಲ್ಲೆಯ ಶಿರೂರಿನಲ್ಲಿ ನಡೆದಿದೆ.
ರೇಣುಕಾ ಮಾದರ ಮೃತ ಮಹಿಳೆ. ಮಷಿನ್ ಗೆ ಜೋಳ ಹಾಕಿಸುವಾಗ ಮಹಿಳೆಯ ಸೀರೆ ಮಷಿನ್ ಗೆ ಸಿಲುಕಿದೆ. ಸೀರೆ ಬಿಡಿಸಿಕೊಳ್ಳುವಷ್ಟರಲ್ಲಿ ಮಹಿಳೆ ಜೋಳದ ಮಷಿನ್ ನ ಚಕ್ರಕ್ಕೆ ಸಿಲುಕಿ ಸಾವನ್ನಪ್ಪಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.