ಹುಬ್ಬಳ್ಳಿ: ವಿಪಕ್ಷ ನಾಯಕ ಸಿದ್ದರಾಮಯ್ಯ ಬಾದಾಮಿ ಬಿಟ್ಟು ಕೋಲಾರದತ್ತ ಮುಖ ಮಾಡಿದ್ದಾರೆ. ಒಂದು ವೇಳೆ ಅವರು ಕೋಲಾರದಲ್ಲಿ ಸ್ಪರ್ಧಿಸಿದ್ರೆ ಅವರನ್ನು ಸೋಲಿಸಿ ಎಂದು ಕೋಲಾರ ಜನತೆಗೆ ಕರೆ ನೀಡುತ್ತೇನೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಸಚಿವ ಪ್ರಹ್ಲಾದ್ ಜೋಶಿ, ಸಿದ್ದರಾಮಯ್ಯ ಚಾಮುಂಡೇಶ್ವರಿ, ಬಾದಾಮಿಯಲ್ಲಿ ಏನು ಮಾಡಿದ್ದಾರೆ. ಕೇಳಿ? ಈಗ ಕೋಲಾರದಲ್ಲಿ ನಿಲ್ಲಲು ಹೊರಟಿದ್ದಾರೆ. ಕೋಲಾರ ಜನತೆ ಅವರನ್ನು ಸೋಲಿಸಬೇಕು ಎಂದು ಹೇಳಿದರು.
ಚಾಮುಂಡೇಶ್ವರಿಯಲ್ಲಿ ಕೆಲಸ ಮಾಡಲಿಲ್ಲ ಹಾಗಾಗಿ ಅವರನ್ನು ಅಲ್ಲಿನ ಜನ ಮನೆಗೆ ಕಳುಹಿಸಿದರು. ಬಾದಾಮಿ ಕ್ಷೇತ್ರದಲ್ಲಿ ಏನು ಪುಣ್ಯ ಇತ್ತೋ ಗೊತ್ತಿಲ್ಲ. ಅಲ್ಲಿ ಆರಿಸಿ ಬಂದರು. ಈಗ ಬಾದಾಮಿ ಬಿಟ್ಟು ಬೇರೆಡೆ ಕ್ಷೇತ್ರ ಹುಡುಕಾಟ ಮಾಡ್ತಿದ್ದಾರೆ. ಸಿದ್ದರಾಮಯ್ಯ ಜನರನ್ನು ವಿಶ್ವಾಸಕ್ಕೆ ಪಡೆದು ಕೆಲಸ ಮಾಡಿಲ್ಲ. ಹಾಗಾಗಿ ಕ್ಷೇತ್ರಕ್ಕಾಗಿ ಸಿದ್ದರಾಮಯ್ಯ ಅಬ್ಬೇಪಾರಿ ಅಂತೆ ಓಡಾಡ್ತಿದ್ದಾರೆ ಎಂದು ವ್ಯಂಗ್ಯವಾಡಿದರು.