alex Certify ಪದೇ ಪದೇ ಆಫೀಸ್ ರೂಂ ಕಸ ಗುಡಿಸಲು ಕರೆದು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ: ಮುಖ್ಯ ಶಿಕ್ಷಕ ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪದೇ ಪದೇ ಆಫೀಸ್ ರೂಂ ಕಸ ಗುಡಿಸಲು ಕರೆದು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ: ಮುಖ್ಯ ಶಿಕ್ಷಕ ಅರೆಸ್ಟ್

ಹಾಸನ: ಹಾಸನ ಜಿಲ್ಲೆ ಬೇಲೂರು ತಾಲೂಕಿನ ಖಾಸಗಿ ಶಾಲೆಯ ಮುಖ್ಯ ಶಿಕ್ಷಕನೊಬ್ಬ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿ ಬಂದಿದೆ. ಆರೋಪಿ ಶಿಕ್ಷಕನನ್ನು ಹೆಣ್ಣು ಮಕ್ಕಳ ಸಂಬಂಧಿಕರು ಥಳಿಸಿದ್ದು, ಮಧ್ಯ ಪ್ರವೇಶಿಸಿದ ಪೊಲೀಸರು ಆತನನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಹತ್ತನೇ ತರಗತಿ ವಿದ್ಯಾರ್ಥಿನಿಯನ್ನು ಪದೇಪದೇ ಆಫಿಸ್ ರೂಂ ಕಸ ಗುಡಿಸಲು ಕರೆದು ಶಿಕ್ಷಕ ಲೈಂಗಿಕ ಕಿರುಕುಳ ನೀಡುತ್ತಿದ್ದ ಎಂದು ದೂರಲಾಗಿದೆ. ವಿದ್ಯಾರ್ಥಿನಿ ಹೆದರಿಕೆಯಿಂದ ಪೋಷಕರಿಗೆ ಮಾಹಿತಿ ನೀಡಿರಲಿಲ್ಲ. ಸಹಪಾಠಿಗಳಿಗೆ ವಿಷಯ ಗೊತ್ತಾದ ನಂತರ ತಾಯಿ ಮತ್ತು ದೊಡ್ಡಪ್ಪನ ಮಗನಿಗೆ ವಿಷಯ ತಿಳಿಸಿದ್ದಾಳೆ. ಗುರುವಾರ ಶಿಕ್ಷಕನನ್ನು ವಿಚಾರಿಸಿದಾಗ ಆತ ಪೊಲೀಸ್ ಠಾಣೆಗೆ ಬರಲು ಒಪ್ಪಿಲ್ಲ. ಸಂಬಂಧಿಕರು ಆತನನ್ನು ಥಳಿಸಿದ್ದಾರೆ. ಮಧ್ಯಪ್ರವೇಶಿಸಿದ ಪೊಲೀಸರು ಶಿಕ್ಷಕನನ್ನು ರಕ್ಷಿಸಿ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಪೊಲೀಸರು ಗ್ರಾಮಕ್ಕೆ ತೆರಳಿ ವಿದ್ಯಾರ್ಥಿನಿಯ ಹೇಳಿಕೆ ಪಡೆದು ಪೋಕ್ಸೋ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...