alex Certify ಮೊಬೈಲ್ ಗೆ ಪಾಸ್ವರ್ಡ್ ಹಾಕಿದ ತಮ್ಮ: ನೇಣಿಗೆ ಶರಣಾದ ಯುವತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೊಬೈಲ್ ಗೆ ಪಾಸ್ವರ್ಡ್ ಹಾಕಿದ ತಮ್ಮ: ನೇಣಿಗೆ ಶರಣಾದ ಯುವತಿ

ದೊಡ್ಡಬಳ್ಳಾಪುರ: ಮೊಬೈಲ್ ಗೆ ತಮ್ಮ ಪಾಸ್ವರ್ಡ್ ಸೆಟ್ ಮಾಡಿದ್ದರಿಂದ ಬೇಸತ್ತ ಅಕ್ಕ ನೇಣಿಗೆ ಶರಣಾದ ಘಟನೆ ದೊಡ್ಡಬಳ್ಳಾಪುರದ ಗಾಣಿಗರ ಪೇಟೆಯಲ್ಲಿ ನಡೆದಿದೆ.

19 ವರ್ಷದ ರುಚಿತಾ ಆತ್ಮಹತ್ಯೆ ಮಾಡಿಕೊಂಡ ಯುವತಿ. ಖಾಸಗಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದ ರುಚಿತಾ ಮೊಬೈಲ್ ನೋಡುವುದರಲ್ಲಿ, ಮಾತಾಡುವುದರಲ್ಲೇ ಹೆಚ್ಚು ಸಮಯ ಕಳೆಯುತ್ತಿದ್ದಳು. ಆಕೆಯನ್ನು ಮೊಬೈಲ್ ಗೀಳಿನಿಂದ ದೂರ ಮಾಡಲು ತಮ್ಮ ಪಾಸ್ವರ್ಡ್ ಸೆಟ್ ಮಾಡಿದ್ದಾನೆ.

ಅಕ್ಕ ಮತ್ತು ತಮ್ಮನ ನಡುವೆ ಈ ವಿಚಾರಕ್ಕೆ ಜಗಳವಾಗಿ ಆಕೆ ನೇಣು ಹಾಕಿಕೊಂಡಿದ್ದಾಳೆ. ದೊಡ್ಡಬಳ್ಳಾಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಗಳ ಸಾವಿನ ನೋವಿನಲ್ಲಿಯೂ ಕುಟುಂಬದವರು ಡಾ. ರಾಜಕುಮಾರ ನೇತ್ರ ಸಂಗ್ರಹಣ ಕೇಂದ್ರಕ್ಕೆ ಕಣ್ಣುಗಳನ್ನು ದಾನ ಮಾಡಿ ಸಾರ್ಥಕತೆ ತೋರಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...