alex Certify ವಿಮಾನ ಕ್ಯಾನ್ಸಲ್​ ಮಾಡಿದ ಹಣ ವಾಪಸ್​ ನೀಡಿ ಎಂದು ಸಿಇಒಗೆ ಕೇಳಿದ ಪ್ರಯಾಣಿಕ: ಅವರು ಕೊಟ್ಟ ಉತ್ತರವೇನು ಗೊತ್ತಾ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಮಾನ ಕ್ಯಾನ್ಸಲ್​ ಮಾಡಿದ ಹಣ ವಾಪಸ್​ ನೀಡಿ ಎಂದು ಸಿಇಒಗೆ ಕೇಳಿದ ಪ್ರಯಾಣಿಕ: ಅವರು ಕೊಟ್ಟ ಉತ್ತರವೇನು ಗೊತ್ತಾ….?

ಜೆಟ್ ಏರ್‌ವೇಸ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಸಂಜೀವ್ ಕಪೂರ್ ಅವರ ಟ್ವಿಟರ್​ ಖಾತೆಯಲ್ಲಿ ವ್ಯಕ್ತಿಯೊಬ್ಬ ಕಮೆಂಟ್​ ಮಾಡಿ 2019 ರಲ್ಲಿ ಕ್ಯಾನ್ಸಲ್​ ಆಗಿರುವ ತನ್ನ ವಿಮಾನದ ಟಿಕೆಟ್​ನ ಹಣ ಮರುಪಾವತಿಯನ್ನು ಕೇಳಿರುವ ಘಟನೆ ನಡೆದಿದೆ.

ಪಿಯೂಷ್​ ತ್ರಿವೇದಿ ಎನ್ನುವವರು ಮಾಡಿದ್ದ ಕಮೆಂಟ್​ಗೆ ಅಸಮಾಧಾನ ವ್ಯಕ್ತಪಡಿಸುತ್ತಲೇ ಸಾವಧಾನವಾಗಿ ಉತ್ತರ ನೀಡಿದ್ದಾರೆ ಸಂಜೀವ್​ ಕಪೂರ್​. ಈ ಸಂದರ್ಭದಲ್ಲಿ ಟ್ವಿಟರ್​ನ ಬ್ಲೂಟಿಕ್​ಗೆ ಎಲಾನ್​ ಮಸ್ಕ್​ ಶುಲ್ಕವನ್ನು ನಿಗದಿ ಮಾಡಿರುವ ವಿಷಯವನ್ನು ಅವರು ಪ್ರಸ್ತಾಪಿಸಿದ್ದಾರೆ. ಟ್ವಿಟರ್​ ಅನ್ನು ಉದ್ಯಮಿ ಎಲಾನ್​ ಮಸ್ಕ್​ ಖರೀದಿ ಮಾಡಿದ ಬಳಿಕ ಅವರು, ಟ್ವಿಟರ್​ನ ಬ್ಲೂಟಿಕ್​ಗೆ ಕೆಲವೊಂದು ಶುಲ್ಕವನ್ನು ನಿಗದಿ ಮಾಡಿದ್ದು, ಅದರ ವಿಷಯವನ್ನು ಕಪೂರ್​ ಪ್ರಸ್ತಾಪಿಸಿದ್ದಾರೆ.

“ಇದು ಅತ್ಯಂತ ಅರ್ಥಹೀನ ಎಂದು ಭಾವಿಸುವವರಲ್ಲಿ ನಾನೂ ಒಬ್ಬ. ಈ ರೀತಿ ಶುಲ್ಕ ನಿಗದಿ ಮಾಡಿರುವುದು ಸರಿಯಲ್ಲ. ಇದೇನು ರಾಕೆಟ್​ ವಿಜ್ಞಾನವಲ್ಲ” ಎಂದಿದ್ದಾರೆ. ಇದಕ್ಕೆ ಟಿಕೆಟ್​ ಮರುಪಾವತಿಯ ಬಗ್ಗೆ ಹೇಳಿದ್ದ ಪಿಯೂಷ್​ ತ್ರಿವೇದಿ ಅವರು, “ಟ್ವಿಟರ್​ ಭಾಷಣ ನನಗೆ ಬೇಡ, ನನಗೆ ನನ್ನ ಹಣ ವಾಪಸ್​ ಕೊಡಿ” ಎಂದಿದ್ದಾರೆ.

ಅದಕ್ಕೆ ಪ್ರತಿಕ್ರಿಯೆ ನೀಡಿದ ಸಂಜೀವ್​ ಕಪೂರ್​, “ಧನ್ಯವಾದಗಳು” ಎಂದು ಹೇಳುವ ಮೂಲಕ, “ನಾನು ನಿಮಗೆ ವೈಯಕ್ತಿಕವಾಗಿ ಹಣ ನೀಡಬೇಕಾಗಿಲ್ಲ, ನಾನು ಜೆಟ್ 1.0 ನ ಭಾಗವೂ ಅಲ್ಲ” ಎಂದಿದ್ದಾರೆ. ಅಷ್ಟೇ ಅಲ್ಲದೇ, ಈ ರೀತಿ ಟಿಕೆಟ್​ ರದ್ದಾದ ಬಳಿಕ ಏನು ಮಾಡಬೇಕು ಎಂದು ಬಗ್ಗೆ ಷರತ್ತು ಮತ್ತು ನಿಬಂಧನೆಗಳನ್ನು ಮೊದಲೇ ತಿಳಿಸಲಾಗಿರುತ್ತದೆಯಲ್ಲವೆ? ಅದನ್ನು ನೀವು ಫಾಲೋ ಮಾಡಿರುವಿರಾ? ಮಾಡಿದ್ದರೆ ಹೇಳಿ ಎಂದಿದ್ದಾರೆ.

ಈ ಸಂದೇಶಕ್ಕೆ ಇದುವರೆಗೆ ಯಾವುದೇ ಉತ್ತರ ಕೊಡದ ಪಿಯೂಷ್​ ತ್ರಿವೇದಿ ಮೌನಕ್ಕೆ ಜಾರಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...