
ಇದೀಗ ಎಲ್ಲರಿಗೂ ರೀಲ್ಸ್ ಮಾಡುವುದು ಎಂದರೆ ಇನ್ನಿಲ್ಲದ ಖುಷಿ. ಅದೇ ರೀತಿ ಜೊಮ್ಯಾಟೋ ಬಾಯ್ ಒಬ್ಬನು ರೀಲ್ಸ್ ಮಾಡಲು ನಡುರಸ್ತೆಯಲ್ಲಿ ನಿಂತು ನೃತ್ಯ ಮಾಡುತ್ತಿರುವ ವಿಡಿಯೋ ಒಂದು ವೈರಲ್ ಆಗಿದೆ.
ಜೊಮ್ಯಾಟೋ ಡೆಲಿವರಿ ಬಾಕ್ಸ್ ಅನ್ನು ಹೊತ್ತುಕೊಂಡು ಹೋಗುತ್ತಿರುವ ಯುವಕನೊಬ್ಬ ಸ್ಕೂಟರ್ ಅನ್ನು ನಿಲ್ಲಿಸಿ ನಡುರಸ್ತೆಯಲ್ಲಿ ಸುಂದರವಾಗಿ ಹೆಜ್ಜೆ ಹಾಕಿದ್ದು, ಈತನ ನೃತ್ಯಕ್ಕೆ ಜನರು ಮನಸೋತಿದ್ದಾರೆ. 31-ಸೆಕೆಂಡ್ನ ಈ ವಿಡಿಯೋದಲ್ಲಿ ಯುವಕ ಮಾಡಿರುವ ಡಾನ್ಸ್ಗೆ ನೆಟ್ಟಿಗರು ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ.
ಜೊಮ್ಯಾಟೊದಲ್ಲಿ ಫುಡ್ ಆರ್ಡರ್ ಮಾಡಿದ ಸಂದರ್ಭದಲ್ಲಿ ಅದನ್ನು ತಲುಪಿಸಲು ವಿಳಂಬವಾದರೆ ಟ್ರಾಫಿಕ್ ಜಾಂ ನೆಪ ಹೇಳುವುದು ಸಾಮಾನ್ಯ. ಆದರೆ ಆರ್ಡರ್ ವಿಳಂಬ ಆಗಲು ಇದೊಂದೇ ಕಾರಣವಲ್ಲ ಎಂದು ಈಗಲಾದರೂ ತಿಳಿಯಿತಾ ಎಂದು ನೆಟ್ಟಿಗರು ಕಮೆಂಟ್ ಮೂಲಕ ತಮಾಷೆ ಮಾಡಿದ್ದಾರೆ. ತಮಾಷೆ ಏನೇ ಇದ್ದರೂ ವಿಡಿಯೋ ಮಾತ್ರ ಎಲ್ಲರ ಹೃದಯ ಗೆದ್ದಿದೆ.
ಈ ವಿಡಿಯೋ ನೋಡಿದ ಮೇಲೆ ಜೊಮ್ಯಾಟೋ ಕಂಪೆನಿ ಯುವಕನ ವಿರುದ್ಧ ಕ್ರಮ ತೆಗೆದುಕೊಂಡುಬಿಟ್ಟರೆ ಎಂಬ ಭಯ ಜನರಲ್ಲಿ ಕಾಡುತ್ತಿದೆ.